ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕೈ' ನಾಯಕರು ಕೊಳಕು ಕೊಳದಲ್ಲಿ ಮಲಗಿದ ಕೋಣವಿದ್ದಂತೆ: ಸದಾನಂದಗೌಡ ವ್ಯಂಗ್ಯ

ಮೈಸೂರು: ಕಾಂಗ್ರೆಸ್‌ ನಾಯಕರು ಕೊಳಕು ಕೊಳದಲ್ಲಿ ಮಲಗಿದ ಕೋಣವಿದ್ದಂತೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಳಕು ಕೊಳದಲ್ಲಿ ಮಲಗಿದ ಕೋಣಕ್ಕೆ ಒಂದು ಏಟು ಬಿದ್ದರೆ ಎಲ್ಲೋ ಏಟು ಬಿದ್ದ ಹಾಗೆ ಕೇಳುತ್ತದೆ. ಎರಡನೇ ಏಟು ಬಿದ್ದಾಗಲೂ ಪಕ್ಕದಲ್ಲಿ, ಮೂರನೇ ಏಟು ಬಿದ್ದಾಗ ಸಮೀಪದಲ್ಲಿ ಶಬ್ದವಾದಂತೆ ಆಗುತ್ತದೆ. ಕೊನೆಗೆ ನಾಲ್ಕನೇ ಏಟು ಬಿದ್ದಾಗ ಹೊಡೆತ ಬಿದ್ದ ಅನುಭವವಾಗುತ್ತದೆ. ಅಂತೆ ಕಾಂಗ್ರೆಸ್‌ನವರಿಗೆ ಈಗ ನಾಲ್ಕನೇ ಏಟು ಬಿದ್ದಿದ್ದು ಎಚ್ಚೆತ್ತುಕೊಂಡಿದ್ದಾರೆ’ ಎಂದು ಲೇವಡಿ ಮಾಡಿದರು.

‘ಈಗ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ನಾಯಕು ರೈತರಿಂದ ಅಂತರ ಕಾಯ್ದುಕೊಂಡು ಮನೆಯಲ್ಲಿ ಕುಳಿತುಕೊಂಡರೆ ಒಳ್ಳೆಯದು. ಮಾಸ್ಕ್‌ ಹಾಕಿಕೊಂಡು ಬಾಯಿ ಮುಚ್ಚಿಕೊಳ್ಳಲಿ. ಆಗಾಗ್ಗೆ ಸ್ಯಾನಿಟೈಸ್ ಹಾಕಿಕೊಳ್ಳಲಿ. ಒಂದು ವೇಳೆ ಅವರ ಅವರ ಕೆಟ್ಟ ಗಾಳಿ ರೈತರಿಗೆ ತಾಗುವ ಅಪಾಯವಿದೆ' ಎಂದು ಕಾಲೆಳೆದರು.

Edited By : Vijay Kumar
PublicNext

PublicNext

08/10/2020 02:23 pm

Cinque Terre

85.94 K

Cinque Terre

12