ಹೈದರಾಬಾದ್: ಇಂದಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಭಾರತ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನ ಎಂದು ಎಐಎಂಐ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂಕೋರ್ಟ್ ಅಲ್ಲಿ ಮಸೀದಿಯನ್ನ ಕೆಡವಲಾಗಿದೆ ಎಂದು ಹೇಳಿದೆ. ಅಲ್ಲಿ ಮೂರ್ತಿ ತಂದಿಟ್ಟಿದ್ಯಾರು? ಬೀಗ ಮುರಿದಿದ್ದು ಹೇಗೆ? ಮಸೀದಿ ಕೆಡವಿದ್ದು ಹೇಗೆ ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ. ಈ ಎಲ್ಲವನ್ನು ಜಾದೂವಿನ ಮೂಲಕ ಮಾಡಲಾಯಿತಾ? ದೇಶದ ಇತಿಹಾಸದಲ್ಲಿ ಸೆಪ್ಟೆಂಬರ್ 30 ಕರಾಳ ದಿನವಾಗಿ ಉಳಿಯಲಿದೆ. ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ವೇಳೆ ರಕ್ತದ ಹೊಳೆಯೇ ಹರಿದಿತ್ತು. ಎಲ್ಲ ಘಟನೆಗಳು ಪೂರ್ವಯೋಜಿತವಾಗಿದ್ದರೂ ಇಂದು ದಿಢೀರ್ ಎಲ್ಲವೂ ಬದಲಾಗಿದೆ ಎಂದು ಹೇಳಿದರು.
ಬಾಬ್ರಿ ಮಸೀದಿ ಕೆಡವಿದಾಗ ಉಮಾ ಭಾರತಿ ಅವರು ‘ಏಕ್ ಧಕ್ಕಾ ಔರ್ ದೋ, ಬಾಬರಿ ಮಸೀದಿ ಗಿರಾದೋ’ ಎಂದು ಘೋಷಣೆ ಕೂಗುತ್ತಿದ್ದರು. ಅಷ್ಟೇ ಅಲ್ಲದೆ ಸಿಹಿ ಹಂಚಿ ಸಂಭ್ರಮಿಸಲಾಗಿತ್ತು. ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಕ್ಕಿಲ್ಲ ಎಂದರು.
PublicNext
30/09/2020 04:41 pm