ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಕೇಂದ್ರದಲ್ಲಿರುವ ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡದಾದ ಏಕಶಿಲಾ ಬೆಟ್ಟ. ಈ ಬೆಟ್ಟವನ್ನು ಹತ್ತಿ ಭಾನುವಾರ ಮಳೆ ಬಂದ ಕಾರಣ ಬೆಟ್ಟ ಇಳಿಯುವುದಕ್ಕೆ ಭಯಪಟ್ಟು ಹಲವು ಗಂಟೆಗಳ ಕಾಲ ತಂದೆ-ಮಗ ಪರದಾಡಿದ್ದಾರೆ. ಬಳಿಕ ರಕ್ಷಣೆ ಮಾಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮಧುಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಪ್ಪ-ಮಗನ ರಕ್ಷಣೆ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
PublicNext
18/07/2022 12:46 pm