ನವದೆಹಲಿ: ಟೀ ಶರ್ಟ್ ವಿಚಾರವಾಗಿ ಲವರ್ಸ್ ಇಬ್ಬರು ಪರಸ್ಪರ ಕಿತ್ತಾಡಿಕೊಂಡು ಬಾಯ್ ಫ್ರೆಂಡ್ ಕೆನ್ನಗೆ ಪ್ರೇಯಸಿ ಬಾರಿಸಿದ ಘಟನೆ ದೆಹಲಿ ಮೆಟ್ರೋ ರೈಲಿನಲ್ಲಿ ನಡೆದಿದೆ.ಹೌದು ದೆಹಲಿ ಮೆಟ್ರೋ ರೈಲಿನಲ್ಲಿ ಯುವಕ, ಯುವತಿ ಪ್ರಯಾಣಿಸುತ್ತಿರುವಾಗ ಯುವತಿ 1,000 ರೂಪಾಯಿಗೆ ಟೀ ಶರ್ಟ್ ಖರೀದಿಸಿರುವ ಬಗ್ಗೆ ತನ್ನ ಬಾಯ್ ಫ್ರೆಂಡ್ ಗೆ ಹೇಳಿದ್ದಾಳೆ.
ಇದಕ್ಕೆ ಯುವಕ ಈ ಟೀ ಶರ್ಟ್ ಗೆ ಇಷ್ಟು ದುಡ್ಡಲ್ಲ ಎಂದು ಹೇಳಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಕೋಪಗೊಂಡ ಯುವತಿ ಯುವಕನಿಗೆ ಎಲ್ಲರ ಮುಂದೆ ಹೊಡೆದಿದ್ದಾಳೆ ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಳಿಕ ರೊಚ್ಚಿಗೆದ್ದು ಯುವಕ ಕೂಡ ಆಕೆಯ ಕೆನ್ನೆಗೆ ಬಾರಿಸಿದ್ದಾನೆ.
ಈ ವೀಡಿಯೋವನ್ನು ಮಂದರ್ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಕೇವಲ ತಮಾಷೆಯ ವೀಡಿಯೋವೋ ಅಥವಾ ಇಬ್ಬರು ನಿಜವಾಗಿಯೂ ಜಗಳವಾಡುತ್ತಿದ್ದಾರೋ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.
PublicNext
15/07/2022 04:35 pm