ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಕರ್ತ ಪ್ರವೀಣ್ ನಾರಾಯಣ ರಾವ್‌ಗೆ ಮಾತೃವಿಯೋಗ

ಶಿರಸಿ: ಪಬ್ಲಿಕ್ ನೆಕ್ಸ್ಟ್‌ನ ಹಿರಿಯ ವರದಿಗಾರ ಪ್ರವೀಣ್ ಕುಮಾರ್ ರಾವ್ ಅವರ ಮಾತೋಶ್ರೀಯವರಾದ ನಳಿನಿ ನಾರಾಯಣ ರಾವ್ (65ವರ್ಷ) ಅವರು ಜೂನ್ 1ರಂದು ಬೆಂಗಳೂರಿನಲ್ಲಿ ನಿಧನರಾದರು.

ಮೂಲತಃ ಶಿರಸಿಯ ಕೆ.ಹೆಚ್.ಬಿ. ಕಾಲೋನಿಯವರಾದ ಶ್ರೀಯುತರು ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು. "ಸರ್ವಾಂಗಿನಿ ಅಮ್ಮ" ಅಂತಲೇ ಪ್ರಸಿದ್ಧಿಯನ್ನು ಗಳಿಸಿದ್ದರು. ಶ್ರೀಯುತರ ಪತಿ ನಾರಾಯಣರಾವ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ಘಟಕದಲ್ಲಿ ನಿವೃತ್ತ ಸಂಚಾರಿ ನಿರೀಕ್ಷಕರಾಗಿದ್ದು, ಕೆ.ಹೆಚ್. ಬಿ. ಕಾಲೋನಿಯ ಪ್ರಸನ್ನಾಂಜನೇಯ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿಗಳಾಗಿದ್ದಾರೆ. ದಿವಂಗತರು ಪತಿ ನಾರಾಯಣ ರಾವ್ ನಾಲ್ಕು ಮಕ್ಕಳು, ಸೊಸೆ, ಅಳಿಯಂದಿರು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ದಿವಂಗತರ ಅಂತಿಮ ಸಂಸ್ಕಾರ ಶಿರಸಿಯ ಸಾಮ್ರಾಟ್ ಹೋಟೆಲ್ ಎದುರಿನ ರುದ್ರಭೂಮಿಯಲ್ಲಿ ಅಪಾರ ಬಂಧುಬಳಗದ ಸಮ್ಮುಖದಲ್ಲಿ ನೆರವೇರಿತು.

Edited By : Vijay Kumar
PublicNext

PublicNext

05/06/2022 12:39 pm

Cinque Terre

19.99 K

Cinque Terre

0