ನವದೆಹಲಿ: ಸಂತೂರ್ ಮಾಂತ್ರಿಕ ಭಜನ್ ಸೊಪೋರಿ ( 73) ಗುರುವಾರ ನಿಧನರಾಗಿದ್ದಾರೆ.
ಸೊಪೋರಿ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪುತ್ರರಾದ ಸೋರಭ್ ಮತ್ತು ಅಭಯ್, ಸಂತೂರ್ ವಾದನದಲ್ಲಿ ಹೆಸರು ಗಳಿಸಿದ್ದಾರೆ.
ಕಳೆದ ವರ್ಷದ ಜೂನ್‌ನಲ್ಲಿ ಸೊಪೋರಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪುತ್ರ ಅಭಯ್ ತಿಳಿಸಿದ್ದಾರೆ.
ನಾಳೆ (ಶುಕ್ರವಾರ) ನವದೆಹಲಿಯ ಲೋಧಿ ರಸ್ತೆಯ ರುದ್ರಭೂಮಿಯಲ್ಲಿ ಸೊಪೋರಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಸೊಪೋರಿ ಅವರ ಸಂತೂರ್ ವಾದನಕ್ಕೆ 2004ರಲ್ಲಿ ಪದ್ಮಶ್ರೀ ಸಹಿತ ಹಲವು ಪ್ರಶಸ್ತಿ, ಗೌರವ ಸಂದಿವೆ.
PublicNext
02/06/2022 09:46 pm