ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೋಟೊಗ್ರಾಫರ್ ಇಲ್ಲವೆಂದು ಮದುವೆ ನಿರಾಕರಿಸಿದ ವಧು.!

ಲಕ್ನೋ: ಈಗಿನ ದುನಿಯಾದಲ್ಲಿ ಮದುವೆ ಅಂದ್ರೆ ಅದ್ಧೂರಿಯಾಗಿ ನಡೆಯುತ್ತವೆ. ಅದರಲ್ಲೂ ಮದುವೆಯಲ್ಲಿ ಎಲ್ಲರ ಗಮನ ಸೆಳೆಯೋದು ಪೋಟೊಗ್ರಾಫರ್. ಮದುವೆ ಸಂದರ್ಭದಲ್ಲಿ ವರ ಪೋಟೊಗ್ರಾಫರ್ ಕರೆತರಲಿಲ್ಲ ಎಂದು ವಧು ಮದುವೆಯನ್ನು ನಿಲ್ಲಿಸಿದ ಪ್ರಸಂಗ ಒಂದು ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಂಗಳಪುರದಲ್ಲಿ ಭಾನುವಾರ ನಡೆಯ ಬೇಕಿದ್ದ ಮದುವೆ ಸಂದರ್ಭದಲ್ಲಿ ಫೋಟೊಗ್ರಾಫರ್ ಅನ್ನು ಕರೆದುಕೊಂಡು ಬರುವಂತೆ ವರನಿಗೆ ವಧು ಹೇಳಿದ್ದರು. ಆದರೆ ವರ ಕ್ಯಾಮೆರಾಮೆನ್‌ನನ್ನು ಕರೆತಂದಿರಲಿಲ್ಲ. ಇದೇ ಕಾರಣಕ್ಕೆ ಕೋಪಕೊಂಡ ವಧು ಮದುವೆಯನ್ನು ನಿಲ್ಲಿಸಿದ್ದಾರೆ. ವಧುವಿನ ಮನೆಯವರು, ಗೆಳತಿಯರು ಮತ್ತು ಆಪ್ತರು ಎಷ್ಟೇ ಮನವೋಲಿಸಿದರೂ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಂದು ನಮ್ಮ ಮದುವೆಯ ಬಗ್ಗೆ ಕಾಳಜಿ ವಹಿಸದ ವ್ಯಕ್ತಿ, ಭವಿಷ್ಯದಲ್ಲಿ ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ? ಮದುವೆಯ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯಲು ಯಾವುದೇ ಛಾಯಾಗ್ರಾಹಕ ಇಲ್ಲದಿದ್ದರೆ ಹೇಗೆ?ಎಂದು ವಧು ಪ್ರಶ್ನೆ ಮಾಡಿದ್ದಾರೆ. ಮದುವೆಯನ್ನು ನಿರಾಕರಿಸಿ ಮದುವೆ ಮಂಟಪದಿಂದ ಮನೆಗೆ ತೆರಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

Edited By : Vijay Kumar
PublicNext

PublicNext

30/05/2022 05:17 pm

Cinque Terre

46.85 K

Cinque Terre

3