ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹಿತಿ ಡಿ.ಎಸ್ ನಾಗಭೂಷಣ ನಿಧನ

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ ಅವರು ಬುಧವಾರ ರಾತ್ರಿ ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ನಾಗಭೂಷಣ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿಮ್ಮಸಂದ್ರದವರು. ಸದ್ಯ ಶಿವಮೊಗ್ಗ ವಿನೋಬನಗರದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದರು. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು 2021ನೇ ಸಾಲಿನಲ್ಲಿ ಇವರ ʻಗಾಂಧಿ ಕಥನʼಕ್ಕೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಮಹಾತ್ಮ ಗಾಂಧಿ ಅವರ ಬದುಕಿನ ವಿವರಗಳನ್ನು ನಿರುದ್ವಿಗ್ನವಾಗಿ ಕಟ್ಟಿಕೊಡುವ ಅಪರೂಪದ ಕೃತಿಯು ಹಲವು ಬಾರಿ ಪುನರ್​ ಮುದ್ರಣವಾಗಿದೆ. ಅನೇಕ ಸಾಹಿತ್ಯ ಪ್ರಶಸ್ತಿಗಳು, ಕನ್ನಡ ಸಂಘಟನೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಸಾಂಸ್ಕೃತಿಕ ನಡೆಗಳ ಬಗ್ಗೆ ಖಚಿತವಾಗಿ ಮಾತನಾಡುವ, ಆಳವಾಗಿ ಚಿಂತಿಸುವ, ನೇರವಾಗಿ ಬರೆಯುವ ಡಿ.ಎಸ್‍ ನಾಗಭೂಷಣ್​ ಸಮಕಾಲೀನ ಸಂದರ್ಭದಲ್ಲಿ ಪ್ರಮುಖ ಸಾಹಿತಿ ಆಗಿದ್ದರು.

Edited By : Nagaraj Tulugeri
PublicNext

PublicNext

19/05/2022 10:45 am

Cinque Terre

17.39 K

Cinque Terre

0