ನವದೆಹಲಿ – ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ 15 ತಿಂಗಳುಗಳ ಕಾಲ ರೈತರು ದೆಹಲಿಯ ಘಾಜಿಯಾಬಾದ್ ಗಡಿಗಳಲ್ಲಿ ಪ್ರತಿಭಟನೆ ನಡೆಸಿದ್ರು.ಕೊನೆಗೂ ಇವರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದ್ದು ರೈತರೆಲ್ಲಾ ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿದ್ದಾರೆ. ಸುದೀರ್ಘ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರಿಗೆ ಹೈವೇಯಲ್ಲಿ ಹೂಮಳೆ ಸುರಿಸಲಾಗಿದೆ. ಹೌದು ರೈತರಿಗೆ ವಿಮಾನದ ಮೂಲಕ ಹೂಮಳೆ ಸುರಿಸುವ ಮೂಲಕ ಅವರ ಶ್ರಮವನ್ನ ಶ್ಲಾಘಿಸಲಾಗಿದೆ.. ಕಳೆದ ವಾರ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದ್ರು..
PublicNext
11/12/2021 10:22 pm