ದಿಯು: ಪ್ಯಾರಾಸೈಲಿಂಗ್ನಲ್ಲಿ ಎಂಜಾಯ್ ಮಾಡುತ್ತಿದ್ದಾಗ ಹಗ್ಗ ತುಂಡಾಗಿ ದಂಪತಿ ಭಾರೀ ಎತ್ತರದಿಂದ ಸಮುದ್ರಕ್ಕೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುಜರಾತ್ ಮೂಲದ ದಂಪತಿ ವೀಕೆಂಡ್ ಕಳೆಯಲು ದಿಯುಗೆ ಬಂದಿತ್ತು. ದಿಯುನಲ್ಲಿರುವ ನಗೋವಾ ಬೀಚ್ನಲ್ಲಿ ಪ್ಯಾರಾಸೈಲಿಂಗ್ನಲ್ಲಿ ಹಾರಾಟ ನಡೆಸಿದ್ದರು. ಎತ್ತರದಲ್ಲಿದ್ದಾಗ ಹಗ್ಗ ತುಂಡಾಗಿದ್ದು, ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಲೈಫ್ ಜಾಕೆಟ್ ಧರಿಸಿದ್ದರಿಂದ ದಂಪತಿಗೆ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ದಂಪತಿಗೆ ಮಗ ಕೂಡ ಇದ್ದ. ಆದರೆ ಆತ ಪ್ಯಾರಾಸೈಲಿಂಗ್ ಏರಿರಲಿಲ್ಲ ಎಂದು ತಿಳಿದುಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಸೈಲಿಂಗ್ ಕಂಪನಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
17/11/2021 12:53 pm