ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದ ಟಗರೊಂದು ಬರೋಬ್ಬರಿ 1.91 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ದೇವಿಪುರ ಗ್ರಾಮದ ಸಣ್ಣಪ್ಪ ಎಂಬವರು ಈ ಟಗರು ಮಾರಿದ ವ್ಯಕ್ತಿ. ಇವರು ಕಳೆದೆರಡು ವರ್ಷದ ಹಿಂದೆ 1 ಲಕ್ಷದ 5 ಸಾವಿರಕ್ಕೆ ಈ ಟಗರನ್ನು ಖರೀದಿಸಿದ್ದರು. ಅದೇ ಟಗರನ್ನು ಇಂದು ದುಬಾರಿ ಮೌಲ್ಯಕ್ಕೆ ಬಿದರಕೋಟೆ ಕೃಷ್ಣಪ್ಪ ಎಂಬುವರಿಗೆ ಮಾರಾಟ ಮಾಡಿ ಗಮನ ಸೆಳೆದಿದ್ದಾರೆ.
ಪೂಜೆ ಮಾಡಿ, ಹಾರ ಹಾಕಿ ದೇವಿಪುರ ಸೇರಿದಂತೆ ನಾಲ್ಕೈದು ಗ್ರಾಮಗಳಲ್ಲಿ ಟಗರಿನ ಮೆರವಣಿಗೆ ಮಾಡಿದ್ದಾರೆ. ಮಾರಾಟದಲ್ಲಿ ದಾಖಲೆ ನಿರ್ಮಿಸಿದ ಟಗರನ್ನು ನೋಡಲು ಜನರ ದಂಡೇ ಆಗಮಿಸಿದ್ದು ವಿಶೇಷವಾಗಿತ್ತು.
PublicNext
07/11/2021 04:26 pm