ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹವಾಮಾನ ವರದಿಯಲ್ಲಿ ಕಾಣಿಸಿಕೊಂಡ ಪೋರ್ನ್‌ ವಿಡಿಯೋ.!- ವೀಕ್ಷಕರು ಕಕ್ಕಾಬಿಕ್ಕಿ

ವಾಷಿಂಗ್ಟನ್: ಬೇಗ ಸುದ್ದಿ ಪ್ರಸಾರ ಮಾಡುವ ದಾವಂತದಲ್ಲಿ ಕೆಲವೊಮ್ಮೆ ಎಡವಟ್ಟು ಆಗುತ್ತದೆ. ಹೀಗೆ ಅಮೆರಿಕದ ವಾಷಿಂಗ್ಟನ್‌ನ ಸ್ಥಳೀಯ ಸುದ್ದಿವಾಹಿನಿಯೊಂದು ಮಾಡಿಕೊಂಡ ಎಡವಟ್ಟು ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು. ಸಿಬಿಎಸ್‌ನ ಅಂಗಸಂಸ್ಥೆಯಾದ ಕ್ರೆಮ್ ವಾಹಿನಿಯಲ್ಲಿ ಈ ಅಚಾತುರ್ಯ ನಡೆದಿದೆ. ಭಾನುವಾರ ಸಂಜೆ 6 ಗಂಟೆಗೆ ಹವಾಮಾನ ವರದಿ ಪ್ರಸಾರದ ವೇಳೆ 10 ಸೆಕೆಂಡ್‌ಗಳ ಪೋರ್ನ್ ವಿಡಿಯೋ ತುಣುಕೊಂದು ಕಾಣಿಸಿಕೊಂಡಿದೆ. ಇದನ್ನು ಕಂಡ ವೀಕ್ಷಕರು ಗಾಬರಿಗೊಂಡಿದ್ದಾರೆ. ಅಷ್ಟೇ ಅಲ್ಲದೆ ಆಕಸ್ಮಿಕ ಘಟನೆಯಾದರೂ ಸುದ್ದಿವಾಹಿನಿಯ ಬೇಜವಾಬ್ದಾರಿತನಕ್ಕೆ ವೀಕ್ಷಕರು ಛೀಮಾರಿ ಹಾಕಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಸುದ್ದಿವಾಹಿನಿಯ ಮುಖ್ಯಸ್ಥರು ವೀಕ್ಷಕರಲ್ಲಿ ಕ್ಷಮೆ ಯಾಚಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Nagesh Gaonkar
PublicNext

PublicNext

22/10/2021 06:40 pm

Cinque Terre

56.28 K

Cinque Terre

0