ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ಏರಿತು ಗ್ಯಾಸ್ ಬೆಲೆ: ಜನಸಾಮಾನ್ಯರ ಮೇಲೆ ಹೊರೆ

ನವದೆಹಲಿ: ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಈ ಮೂಲಕ ಜನಸಾಮಾನ್ಯರ ಮೇಲೆ ಮತ್ತೆ ಬೆಲೆ ಏರಿಕೆ ಎಂಬ ಬರೆ ಬಿದ್ದಿದೆ. ಪ್ರತಿ ಸಿಲಿಂಡರ್‍ಗೆ 25 ರೂ.ಹೆಚ್ಚಳ ಮಾಡಲಾಗಿದೆ. ಈ ಮೂಲಕ ಪ್ರತಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 769 ರೂ.ಗಳಿಂದ 794 ರೂ.ಗೆ ಏರಿಕೆಯಾಗಿದೆ.

ಈ ತಿಂಗಳಲ್ಲಿ 3ನೇ ಬಾರಿ ಸಿಲಿಂಡರ್ ಬೆಲೆ ಹೆಚ್ಚಳವಾದಂತಾಗಿದ್ದು, ಇತ್ತೀಚೆಗೆ ಫೆಬ್ರವರಿ 4ರಂದು 25 ರೂ.ಹೆಚ್ಚಳವಾಗಿತ್ತು. ಬಳಿಕ ಫೆಬ್ರವರಿ 15ರಂದು ಮತ್ತೆ ಬರೋಬ್ಬರಿ 50 ರೂ.ಹೆಚ್ಚಳವಾಗಿತ್ತು. ಇದೀಗ ಮತ್ತೆ 25ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ಕೋಲ್ಕತ್ತಾದಲ್ಲಿ 795ರೂ.ನಿಂದ 820 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 769ರೂ.ನಿಂದ 794ರೂ.ಗೆ ತಲುಪಿದೆ. ಚೆನ್ನೈನಲ್ಲಿ 785 ರೂ.ನಿಂದ 846.50 ರೂ.ಗೆ ಏರಿಕೆಯಾಗಿದೆ. ಹೈದರಾಬಾದ್‍ನಲ್ಲಿ 821.50ರೂ.ನಿಂದ 846.50 ರೂ.ಗೆ ತಲುಪಿದೆ.

Edited By : Nagaraj Tulugeri
PublicNext

PublicNext

25/02/2021 07:33 pm

Cinque Terre

129.96 K

Cinque Terre

59