ಧಾರವಾಡ: ಶಿವಮೊಗ್ಗದಲ್ಲಿ ಮೊನ್ನೆ ನಡೆದ ಡೈನಾಮೈಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ರಾಜ್ಯದ ಗಣಿ ಸಚಿವ ಮುರುಗೇಶ ನಿರಾಣಿ ಅವರಿಗೆ ಸೂಚಿಸಿದ್ದೇನೆಎಂದು ಕೇಂದ್ರದ ಗಣಿ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೂಡ ಆ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಈ ಗಣಿಗಾರಿಕೆ ನಿಯಮಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಈ ರೀತಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿರುವುದು ದುರ್ದೈವ. ಕಲಘಟಗಿಯಲ್ಲೂ ಜಿಲೆಟಿನ್ ಪತ್ತೆಯಾಗಿದೆ. ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಕ್ರಮ ಗಣಿಗಾರಿಕೆಗಳ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಮಾಧಿಯಾಗುತ್ತಿದೆ. ಕಾಂಗ್ರೆಸ್ ಈಗ ಭೂತಕಾಲದ ಪಾರ್ಟಿ. ಆ ಪಕ್ಷದ ಹೈಕಮಾಂಡ್ ಸಂಪೂರ್ಣ ವೀಕ್ ಆಗಿದೆ. ಯುವ ಕಾಂಗ್ರೆಸ್ ಘಟಕದ ಚುನಾವಣೆಯಲ್ಲೂ ಗೋಲ್ ಮಾಲ್ ನಡೆದಿದೆ. ಅಲ್ಲಿ ಸದ್ಯ ಕಾಯಂ ಅಧ್ಯಕ್ಷರೇ ಇಲ್ಲದಾಗಿದೆ. ಕಾಂಗ್ರೆಸ್ ಎಂಬುದು ಒಂದು ಜಾತ್ರೆ ಇದ್ದಂತೆ ಎಂದರು.
PublicNext
23/01/2021 03:06 pm