ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

50ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: 50 ರೈತರ ಸಾವು

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ. ಆದರೂ ಬಿಗಿಪಟ್ಟು ಸಡಿಲಿಸದ ರೈತರು ದಿಲ್ಲಿ ಗಡಿಗಳಲ್ಲಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ಈ ಬೃಹತ್ ಪ್ರತಿಭಟನೆಯು ಗುರುವಾರ 50ನೇ ದಿನಕ್ಕೆ ಕಾಲಿಟ್ಟಿದೆ. ಜೊತೆಗೆ ಜನವರಿ 26ರ ಗಣರಾಜ್ಯೋತ್ಸವ ಪರೇಡ್‌ಗೆ ಪರ್ಯಾಯವಾಗಿ ತಾವು ಟ್ರಾಕ್ಟರ್‌, ಟ್ರಾಲಿ ಪರೇಡ್‌ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ರೈತರು ಎಚ್ಚರಿಸಿದ್ದಾರೆ.

ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್‌ ಒಕ್ಕೂಟ(ಬಿಕೆಯು) ಮುಖಂಡ ಪಾಲ್‌ ಮಜ್ರಾ, ರೈತ ವಿರೋಧಿ ಕಾನೂನುಗಳ ಹಿಂಪಡೆತಕ್ಕೆ ಆಗ್ರಹಿಸಿ ದಿಲ್ಲಿ ಗಡಿಗಳಲ್ಲಿ ಮೈಕೊರೆಯುವ ಚಳಿ, ಗಾಳಿ, ಮಳೆ ಹಾಗೂ ರಾತ್ರಿ-ಹಗಲು ಎನ್ನದೇ ಕಳೆದ ಒಂದುವರೆ ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದೇವೆ.

ಈ ಹೋರಾಟದಲ್ಲಿ ಭೀಕರ ಚಳಿ ಸೇರಿದಂತೆ ಇನ್ನಿತರ ಕಾರಣಗಳಿಂದ 50ಕ್ಕೂ ಹೆಚ್ಚು ಅನ್ನದಾತರು ಮೃತಪಟ್ಟಿದ್ದಾರೆ. ಈ ಕಾಯ್ದೆಗಳ ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

15/01/2021 10:51 am

Cinque Terre

77.72 K

Cinque Terre

3