ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ನ್ನು ಮಂಗಳವಾರ ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
ಒಂದು ರಾಷ್ಟ್ರ, ಒಂದು ಅನಿಲ್ ಗ್ರಿಡ್ ರಚನೆಗೆ ಈ ಕಾರ್ಯಕ್ರಮವು ಪ್ರಮುಖ ಮೈಲ್ಲುಗಲ್ಲಾಗಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡರುವ ಮೋದಿಯವರು, ಜ.5 ಭಾರತದ ಆತ್ಮನಿರ್ಭರತಯ ಅನ್ವೇಷಣೆಯಲ್ಲಿ ಒಂದು ಹೆಗ್ಗುರುತಿನ ದಿನ.
450 ಕಿ.ಮೀ.ಉದ್ದದ ಪೈಪ್ ಲೈನ್ ನ್ನು ಗೈಲ್ (ಇಂಡಿಯಾ)ಲಿಮಿಟೆಡ್ ನಿರ್ಮಿಸಿದೆ. ಯೋಜನೆಯ ಒಟ್ಟು ವೆಚ್ಚ 3,000 ಕೋ.ರೂ.
ಅನೇಕ ಅಡೆತಡೆಗಳನ್ನು ಎದುರಿಸಿ ಕೊನೆಗೂ ಈಗ ಕಾರ್ಯಾರಂಭಕ್ಕೆ ಸಜ್ಜಾಗಿದೆ.
ನವೆಂಬರ್' ನಲ್ಲಿ ಪೈಪ್'ಲೈನ್ ಮೂಲಕ ಪ್ರಾಯೋಗಿಕವಾಗಿ ಸಿಎನ್' ಜಿ ಪೂರೈಕೆ ಆರಂಭವಾಗಿದೆ.
PublicNext
05/01/2021 10:31 am