ಸ್ಪ್ಯಾನಿಷ್: ಗಾಯನ ಮೋಡಿಗೆ ಎಲ್ಲರೂ ಮಂತ್ರಮುಗ್ಧರಾಗ್ತಾರೆ. ನಾವೇ ವಾದ್ಯ ನುಡಿಸುತ್ತ ತನ್ಮಯರಾಗಿ ಹಾಡುವುದು ಇನ್ನೂ ಆನಂದ ಕೊಡುತ್ತೆ. ಇದು ಒಳ್ಳೆಯ ಹವ್ಯಾಸವೂ ಹೌದು. ಆದ್ರೆ ಇಂತದ್ದೇ ಸಂದರ್ಭದಲ್ಲಿ ಯುವತಿಯ ಕೂದಲಿಗೆ ಬೆಂಕಿ ತಾಕಿದೆ.
ಹೌದು.. ಈ ಘಟನೆ ನಡೆದಿದ್ದು ಸ್ಪ್ಯಾನಿಷ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ. ಮೂಲತಃ ಯುಕೆಯವರಾದ ಸೋಫಿಯಾ ಎಲ್ಲಾರ್, ತನ್ನ ಗೆಳೆಯ ಅಲ್ವಾರೋ ಸೋಲರ್ ಅವರೊಂದಿಗೆ ಕ್ರಿಸ್ಮಸ್ ಹಬ್ಬದ ಕ್ಷಣವನ್ನು ಆನಂದಿಸುತ್ತಿದ್ದರು. ಕ್ರಿಸ್ಮಸ್ ಟ್ರೀ ಮತ್ತು ಕ್ಯಾಂಡೆಲ್‌ಗಳು ಸುತ್ತವರಿದಿದ್ದ ಸುಂದರ ವಾತಾವರಣದಲ್ಲಿ ಇಬ್ಬರೂ ಹಾಡು ಹೇಳುತ್ತಾ ಖುಷಿಯಲ್ಲಿದ್ದರು.
ಆದರೆ, ಈ ವೇಳೆ ನಡೆಯಬಾರದ ಘಟನೆಯೊಂದು ನಡೆಯಿತು. ಅದೇನೆಂದರೆ, ಹಾಡಿನ ಮೋಡಿಗೆ ಸೋಫಿಯಾ ತನ್ನ ಬೆನ್ನನ್ನು ಹಿಂದಕ್ಕೆ ಬಾಗಿಸುತ್ತಿದ್ದಂತೆಯೇ ಅವರ ತಲೆಕೂದಲು ಉರಿಯುತ್ತಿದ್ದ ಮೇಣದ ಬತ್ತಿಗೆ ತಾಗಿತ್ತು. ಇದಾದ ಅರೆಕ್ಷಣದಲ್ಲಿ ಸೋಫಿಯಾ ತಲೆಕೂದಲಿಗೆ ಬೆಂಕಿ ಹೊತ್ತಿಕೊಂಡಿತ್ತು...!
ಆರಂಭದಲ್ಲಿ ತನ್ನ ತಲೆಕೂದಲಿಗೆ ಬೆಂಕಿ ತಗುಲಿದೆ ಎಂದು ಸೋಫಿಯಾಗೂ ಗೊತ್ತಾಗಿರಲಿಲ್ಲ. ಹೀಗಾಗಿ, ಇವರು ಹಾಡು ಮುಂದುವರಿಸಿದ್ದರು. ಇದಾದ ಅರೆಕ್ಷಣದಲ್ಲಿ ವಿಷಯ ಗೊತ್ತಾಗಿ ಸೋಫಿಯಾ ಭಯದಲ್ಲಿ ಓಡಿದ್ದರು. ಈ ವೇಳೆ, ಗೆಳೆಯ ಅಲ್ವಾರೋ ಭಯದಲ್ಲಿಯೇ ಸೋಫಿಯಾ ತಲೆಕೂದಲಿಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.
PublicNext
29/12/2020 03:41 pm