ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳಿಯ ನಡುವೆ ರಾತ್ರಿಯಿಡೀ ನಾಡಧ್ವಜ ಕಾಯ್ದ ಕಾರ್ಯಕರ್ತರು

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆ ಮಾಡಿ,ಕನ್ನಡದ ಧ್ವಜ ಹಾರಿಸಿದ ಹೋರಾಟಗಾರರು, ಮೈ ಕೊರೆವ ಚಳಿಯಲ್ಲೇ ಧ್ವಜಸ್ತಂಭ ಬಳಿ ಅಹೋರಾತ್ರಿ ಕಾವಲು ಕಾದಿದ್ದಾರೆ. ಕನ್ನಡದ ಧ್ವಜ ಪಾಲಿಕೆ ಮುಂದೆ ಈವರೆಗೂ ಸುರಕ್ಷಿತವಾಗಿದೆ.

ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಈಗಲೂ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಕನ್ನಡಪರ ಘೋಷಣೆ ಕೂಗುತ್ತಾ ಧ್ವಜ ಕಂಬದ ಪಕ್ಕದಲ್ಲೇ ಕುಳಿತುಕೊಂಡಿದ್ದಾರೆ.

ಕನ್ನಡ ಕನ್ನಡ ಬನ್ನಿ ನಮ್ಮ‌ ಸಂಗಡ ಎಂದು ಘೋಷಣೆ ಕೂಗುವ ಮೂಲಕ ಕಾರ್ಯಕರ್ತರು ಧ್ವಜ ಕಾವಲು ಕಾರ್ಯವನ್ನು ಮುಂದುವರೆಸಿದ್ದಾರೆ.

Edited By : Nagaraj Tulugeri
PublicNext

PublicNext

29/12/2020 08:26 am

Cinque Terre

38.82 K

Cinque Terre

0