ಇತ್ತೀಚಿನ ದಿನಗಳಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಸರ್ಗದ ಮಡಿಲಲ್ಲಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಅನಾಹುತ ಮಾಡಿಕೊಂಡ ಉದಾಹರಣೆಗಳು ಉಂಟು. ಅಷ್ಟೇ ಅಲ್ಲದೆ ಸಿಕ್ಕಪಟ್ಟೆ ಟ್ರೋಲ್ ಆಗಿದ್ದನ್ನೂ ನಾವು ನೋಡಿದ್ದೇವೆ. ಕೆಲ ತಿಂಗಳ ಹಿಂದಷ್ಟೇ ಕೇರಳದ ಜೋಡಿಯೊಂದು ಹನಿಮೂನ್ನಲ್ಲಿ ಹಾಟ್ ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಸಖತ್ ಟ್ರೋಲ್ ಆಗಿದ್ದರು. ಇಂತಹದ್ದೇ ವಿಚಾರಕ್ಕೆ ಮತ್ತೊಂದು ಜೋಡಿ ಸಿಕ್ಕಪಟ್ಟೆ ವೈರಲ್ ಆಗಿದೆ.
ಬಾನೋ ಬಂಗಾಲಿ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿರುವ ಪ್ರಿ ವೆಡ್ಡಿಂಗ್ ಪೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಜೋಡಿಯು ಬಾಳೆ ಎಲೆ ಮತ್ತು ಕೆಸುವಿನ ಎಲೆ ಬಳಸಿ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ಕಿಯಾರಾ ಅಟ್ವಾಣಿ ಇದೇ ರೀತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ಅವತಾರದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ವಧು-ವರರ ಬಗ್ಗೆ ಭರ್ಜರಿ ಕಮೆಂಟ್‌ಗಳು ಹರಿದು ಬರುತ್ತಿವೆ.
'ಇದು ಪ್ರಿ ಹನಿಮೂನ್ ಪೋಟೋ ಶೂಟ್ ತರಹ ಕಾಣಿಸುತ್ತಿದೆ'. 'ಕೇವಲ ಹದಿಮೂರು ಪೋಟೋಕ್ಕೆ ಇದು ಯಾಕೆ ಕೊನೆಯಾಗಿದೆ. ಮುಂದಿನದ್ದು ಇಲ್ಲವೇ?'. ಇದು ನಿಜವಾದ ನಿಸರ್ಗದ ಶಕ್ತಿ ಎಂದು ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
PublicNext
28/12/2020 10:45 pm