ಬೆಳಗಾವಿ: ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಕೊನೆಗೂ ಚಪ್ಪಲಿ ತೊಟ್ಟಿದ್ದಾರೆ. ಮಹಾನಗರ ಪಾಲಿಕೆ ಎದುರು ಕನ್ನಡದ ಧ್ವಜ ಹಾರುವವರೆಗೂ ಚಪ್ಪಲಿ ಮೆಟ್ಟುವುದಿಲ್ಲ ಎಂದು 2005 ಜೂನ್ 6ರಂದು ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಪ್ರತಿಜ್ಞೆ ತೊಟ್ಟಿದ್ದರು. ಕನ್ನಡಪರ ಸಂಘಟನೆಗಳ ಮುಖಂಡರು ಪಾಲಿಕೆ ಎದುರು ಕನ್ನಡದ ಧ್ವಜ ಹಾರಿಸಿದ ನಂತರ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಅವರಿಗೆ ಚಪ್ಪಲಿ ತೊಡಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡದ ಧ್ವಜ ಹಾರಿಸಿರುವ ಕನ್ನಡಪರ ಸಂಘಟನೆಗಳ ಮುಖಂಡರು, ನಂತರ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಅವರಿಗೆ ಚಪ್ಪಲಿ ತೊಡಿಸಿದ್ದಾರೆ.
ಈ ವೇಳೆ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ ಮಾತನಾಡಿ, 2005ರ ಜೂನ್ 26ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. ಕನ್ನಡ ಪರ ಮನಸ್ಸುಗಳು ಮಾತನಾಡಲು ಆಗ್ರಹಿಸಿದಾಗ ಏನು ಮಾತನಾಡಬೇಕೋ ತೋಚಲಿಲ್ಲ. ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಾಡುವವರಿಗೆ ಚಪ್ಪಲಿ ಮೆಟ್ಟುವುದಿಲ್ಲ ಎಂದು ಪ್ರತಿಜ್ಞೆ ತೊಟ್ಟಿದ್ದೆ. ಈಗ ಕನ್ನಡಪರ ಸಂಘಟನೆಯವರು ಚಪ್ಪಲಿ ತೊಡಿಸಿದ್ದಾರೆ. ನವೆಂಬರ್ 1ರಂದು ಹಾರಿಸಿದ್ದ ಧ್ವಜವನ್ನು ಮೂರೇ ಗಂಟೆಯಲ್ಲಿ ತೆರವುಗೊಳಿಸಿದರು. 2017ರಲ್ಲೂ ಹೀಗೆಯೇ ಮಾಡಿದರು. ಈಗ ಒಂದು ವೇಳೆ ಧ್ವಜ ತೆರವುಗೊಳಿಸಿದರೆ ಚಪ್ಪಲಿ ತೆಗೆಯುತ್ತೇನೆ ಎಂದರು.
ಒಟ್ಟಿನಲ್ಲಿ ಕನ್ನಡ ಹೋರಾಟಗಾರ್ತಿ ಕಸ್ತೂರಿ ಬಾವಿ ಅವರ ಪ್ರತಿಜ್ಞೆ ಈಡೇರಿದೆ. ಕೊನೆಗೂ ಅವರು ಚಪ್ಪಲಿ ಮೆಟ್ಟಿದ್ದು, ಪಾಲಿಕೆಯವರು ಕನ್ನಡದ ಧ್ವಜ ಹಾರಿಸುವುದನ್ನು ಮುಂದುವರಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
PublicNext
28/12/2020 02:13 pm