ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್‌ ಆ್ಯಪ್ ಕೊಂಚ ನವೀಕರಣ- ಇಲ್ಲಿದೆ ಮಾಹಿತಿ

ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್‌ ಆ್ಯಪ್ ಕೊಂಚ ನವೀಕರಣಗೊಂಡಿದೆ. ಓದುಗರಿಗೆ ಅನುಕೂಲವಾಗುವಂತೆ ಹಾಗೂ ಮತ್ತೊಬ್ಬರೊಂದಿಗೆ ವಿಚಾರ, ಸುದ್ದಿಗಳನ್ನು ಹಂಚಿಕೊಳ್ಳಲು ನಾವು ನಿಮಗಾಗಿ ವೇದಿಕೆ ಕಲ್ಪಿಸುತ್ತಿದ್ದೇವೆ. ಹೀಗಾಗಿ ನೀವು ಮೊದಲು ನಮ್ಮ ಆ್ಯಪ್‌ ಅನ್ನು ಅಪ್‌ಡೇಟ್‌ ಮಾಡಿಕೊಳ್ಳುವುದು ಅಗತ್ಯವಾಗಿದೆ.

ಈಗಾಗಲೇ ಪಬ್ಲಿಕ್‌ ನೆಕ್ಸ್ಟ್‌ ಆ್ಯಪ್ ಬಳಸುತ್ತಿರುವ ನಿಮ್ಮ ಸ್ನೇಹಿತರನ್ನು ನೀವು ಹುಡುಕಬಹುದಾಗಿದೆ. ಹೌದು ಸ್ಕ್ರೀನ್ ಮೇಲೆ ಕಾಣುವ ಸರ್ಚ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸ್ನೇಹಿತರನ್ನು ಹುಡುಕಬಹುದು. ಈ ಮೂಲಕ ಅವರನ್ನು ಫಾಲೋ ಮಾಡಿ ವಿಚಾರ ಹಾಗೂ ಸುದ್ದಿಗಳನ್ನು ಹಂಚಿಕೊಳ್ಳಬಹುದಾಗಿದೆ.

ಕೆಲವು ಬಾರಿ ಯಾವುದೋ ಸುದ್ದಿಗೆ ಸಾಮಾನ್ಯವಾಗಿ ಕಮೆಂಟ್ ಮಾಡುತ್ತೇವೆ. ಇದರೊಂದಿಗೆ ಇನ್ನುಮುಂದೆ ನಿರ್ದಿಷ್ಟವಾಗಿ ಒಬ್ಬರನ್ನು ಇಲ್ಲವೇ ಅನೇಕರನ್ನು ಟ್ಯಾಗ್‌ ಮಾಡಿ ಕಮೆಂಟ್ ಮಾಡಬಹುದು. ಹೇಗೆ ಮಾಡಬೇಕು ಅಂತ ಈ ವಿಡಿಯೋ ನೋಡಿ...

ನಿಮ್ಮ ಊರಿನ ಸುದ್ದಿ, ಸಮಸ್ಯೆ ಅಥವಾ ಲೇಖನ ಬರೆದು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಪಬ್ಲಿಕ್ ನೆಕ್ಸ್ಟ್‌ ಈಗಾಗಲೇ ವೇದಿಕೆ ಕಲ್ಪಿಸಿದೆ. ನಿಮ್ಮ ಲೇಖನದ ಮೊದಲು, ಇಲ್ಲವೇ ಮಧ್ಯ ಅಥವಾ ಕೊನೆಯಲ್ಲಿ ಸ್ನೇಹಿತರನ್ನು ಟ್ಯಾಗ್ ಮಾಡಬಹುದು. ಇದರಿಂದಾಗಿ ನೀವು ಹಾಕುವ ಸುದ್ದಿ ಟ್ಯಾಗ್‌ ಮಾಡಿದ ಎಲ್ಲ ಸ್ನೇಹಿತರಿಗೆ ನೋಟಿಫಿಕೇಶನ್ ಮೂಲಕ ತಲುಪುತ್ತದೆ. ಈ ಬಗ್ಗೆ ಮಾಹಿತಿ ಪಡೆಯಲು ಇದನ್ನು ನೋಡಿ...

ಪಬ್ಲಿಕ್ ನೆಕ್ಸ್ಟ್ ನಲ್ಲಿ ರೀ ಪೋಸ್ಟ್ ಅವಕಾಶ ನೀಡಲಾಗಿದೆ. ವಿಶೇಷವೆಂದರೆ ಸುದ್ದಿ, ಸಮಾಚಾರಗಳನ್ನು ನೀವು ರೀ ಪೋಸ್ಟ್ ಮಾಡಿದರೆ ಅದನ್ನ ನಿಮ್ಮ ಫಾಲೋವರ್ಸ್ ಗಳು ಕೂಡ ನೋಡಬಹುದು. ಜೊತೆಗೆ ರೀ ಪೋಸ್ಟ್ ವಿಥ್ ಕಮೆಂಟ್ ಅವಕಾಶವನ್ನು ನೀಡಲಾಗಿದೆ. ಓದುಗರು ಯಾವುದೇ ಸುದ್ದಿ ಸಮಾಚಾರವನ್ನು ರೀ ಪೋಸ್ಟ್ ಮಾಡುವ ಮುನ್ನ ಅದಕ್ಕೆ ನಿಮ್ಮ ಅನಿಸಿಕೆ ಸೇರಿಸಬಹುದು. ಜೊತೆಗೆ ನಿಮ್ಮ ಫಾಲೋವರ್ಸ್ ಗಳನ್ನು ಹೊರತುಪಡಿಸಿ ಇತರರನ್ನು ಟ್ಯಾಗ್ ಮಾಡಬಹುದು.

ನಿಮ್ಮ ಕಮೆಂಟ್ ಅಥವಾ ಸುದ್ದಿಯನ್ನು ನಮ್ಮ ವರದಿಗಾರರಿಗೆ ಟ್ಯಾಗ್ ಮಾಡಲು ಬಯಸಿದ್ದಲ್ಲಿ @PN ಎಂದು ಬರೆದರೆ ಎಲ್ಲ ರಿಪೋರ್ಟ್ ಹೆಸರು ಬರುತ್ತದೆ. ಈ ಮೂಲಕ ಸಂಬಂಧಪಟ್ಟ ವರದಿಗಾರರಿಗೆ ನೀವು ಸಂದೇಶ ನೀಡಬಹುದಾಗಿದೆ.

Edited By : Nagesh Gaonkar
PublicNext

PublicNext

16/12/2020 06:34 pm

Cinque Terre

163.42 K

Cinque Terre

15