ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಸ್.ಆರ್. ಕಂಠಿ ಅವರ ಧರ್ಮಪತ್ನಿ ಮರಿಬಸಮ್ಮ ಎಸ್ ಕಂಠಿ ವಯೋಸಹಜ ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಮರಿಬಸಮ್ಮ ಎಸ್ ಕಂಠಿ ಅವರಿಗೆ 103 ವರ್ಷ ವಯಸಾಗಿತ್ತು. ಬಾಗಲಕೋಟ ಜಿಲ್ಲೆಯ ಇಲಕಲ್ಲನಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮಾ ಬಾಲಕಿಯರ ವಸತಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ರಾಜ್ ಕಂಠಿ ಸೇರಿದಂತೆ ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.
PublicNext
09/12/2020 07:39 am