IPL ಪಂದ್ಯಾವಳಿ ಸಂದರ್ಭದಲ್ಲಿ ಆಯೋಜಿಸಿದ್ದ ಸ್ಪರ್ಧೆಯ ಫಲಿತಾಂಶವನ್ನು ನಿಮ್ಮ PublicNext ಪ್ರಕಟಿಸಿದೆ.
ನಮ್ಮ ನಿಯಮಾವಳಿಗಳಂತೆ ಪಂದ್ಯದ ಆರಂಭದಿಂದಲೂ ಮುಕ್ತಾಯದವರೆಗೆ ನಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಗೆಲ್ಲುವ ತಂಡಕ್ಕೆ ಓಟ್ ಮಾಡಿದ ಸಾವಿರಾರು ಕ್ರಿಕೆಟ್ ಪ್ರೇಮಿಗಳಲ್ಲಿ ಮೂವರು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಬಹುಮಾನ 1,00,000 ರೂ, ದ್ವಿತೀಯ ಬಹುಮಾನ 50,000 ರೂ ಹಾಗೂ ತೃತೀಯ ಬಹುಮಾನ 25,000 ರೂ ನೀಡಲಾಗಿದೆ.
ಪ್ರಕಾಶ್ ಎಸ್ ಪ್ರಥಮ, ( ಹುಬ್ಬಳ್ಳಿ ), ಪ್ರಶಾಂತ ನಾಯಕ್, ದ್ವಿತೀಯ (ಹುಬ್ಬಳ್ಳಿ ) ಹಾಗೂ ಪ್ರಕಾಶ್ ಹೂವಿನಹಳ್ಳಿ ತೃತೀಯ (ಧಾರವಾಡ) ಬಹುಮಾನಕ್ಕೆ ಭಾಜನರಾಗಿದ್ದಾರೆ.
ಎಲ್ಲ ಬಹುಮಾನ ವಿಜೇತರರಿಗೂ ಪಬ್ಲಿಕ್ ನೆಕ್ಸ್ಟ್ ಸಮಸ್ತ ಓದುಗರ ಪರವಾಗಿ ಹಾಗೂ ಆಡಳಿತ ಮಂಡಳಿ ಪರವಾಗಿ ಅಭಿನಂದನೆಗಳು.
ಪಂದ್ಯಾವಳಿ ಆರಂಭದಿಂದಲೂ ನಿತ್ಯ ಗೆಲ್ಲುವ ತಂಡಕ್ಕೆ ಓಟ್ ಮಾಡಲು ಸೂಚಿಸಲಾಗಿತ್ತು. ಎಲ್ಲ ಪಂದ್ಯಗಳಿಗೂ ಓಟ್ ಮಾಡಿದವರನ್ನು ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಸುಮಾರು 25 ಸಾವಿರಕ್ಕೂ ಹೆಚ್ಚು ಕ್ರಿಕೆಟ್ ಪ್ರೇಮಿಗಳು ನಮ್ಮ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಹುಬ್ಬಳ್ಳಿಯ ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ಐಪಿಎಲ್ ಪಂದ್ಯಾವಳಿ ಸ್ಪರ್ಧೆಯ ಪ್ರಾಯೋಜಕತ್ವ ವಹಿಸಿತ್ತು. ಶನಿವಾರ ಸ್ವರ್ಣಾ ಪ್ಯಾರಾಡೈಸ್ ಹೊಟೆಲ್ ದಲ್ಲಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ.Ch. V.S.V ಪ್ರಸಾದ್ ಅವರು ವಿಜೇತರಿಗೆ ಚೆಕ್ ವಿತರಿಸಿದರು.
PublicNext
28/11/2020 08:23 pm