ಲಂಡನ್ : ಚೀನೀ ಕಂಪನಿಗಳು ಹೂಡಿರುವ ವ್ಯಾಜ್ಯಕ್ಕೆ ಸಾಲ ಮರುಪಾವತಿಸಲು ಅಥವಾ ಕಾನೂನು ಹೋರಾಟದ ವೆಚ್ಚ ಭರಿಸುವುದಕ್ಕೆ ತನ್ನ ಬಳಿ ಈಗ ಬೆಲೆ ಬಾಳುವಂಥದ್ದೇನೂ ಉಳಿದಿಲ್ಲ ಎಂದು ಅನಿಲ್ ಅಂಬಾನಿ ಲಂಡನ್ ಕೋರ್ಟ್ಗೆ ತಿಳಿಸಿರುವುದಾಗಿ ವರದಿಯಾಗಿದೆ.
ಅನಿಲ್ ಧೀರೂಭಾಯ್ ಅಂಬಾನಿ ಗ್ರೂಪ್ ನ ಚೇರ್ ಮನ್ ಅನಿಲ್ ಅಂಬಾನಿ ಈಗ ಪಾಪರ್ ಆಗಿರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಮೂರು ಚೀನೀ ಬ್ಯಾಂಕುಗಳು – ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಚೀನಾ ಡೆವಲಪ್ ಮೆಂಟ್ ಬ್ಯಾಂಕ್, ಎಕ್ಸಿಮ್ ಬ್ಯಾಂಕ್ ಆಫ್ ಚೀನಾಗಳು- ಅನಿಲ್ ಅಂಬಾನಿ ವಿರುದ್ಧ ವ್ಯಾಜ್ಯ ಹೂಡಿವೆ.
680 ಶತಕೋಟಿ ಡಾಲರ್ ಸಾಲ ಮರುಪಾವತಿಸಿಲ್ಲ, ಅಲ್ಲದೆ, ಮರುಸಾಲ ರೂಪದಲ್ಲಿ ಪಡೆದ 925 ದಶಲಕ್ಷ ಡಾಲರನ್ನೂ ಹಿಂದಿರುಗಿಸದೇ ವಂಚನೆ ಎಸಗಿದ್ದಾರೆ ಎಂಬ ಆರೋಪ ಹೊರಿಸಿವೆ.
ಈ ಸಂಬಂಧ ಮಾಧ್ಯಮಗಳಲ್ಲಿ ಅನೇಕ ಸ್ಟೋರಿಗಳು ಬಂದಿರುವುದನ್ನು ಗಮನಿಸಿ, ಅನಿಲ್ ಅಂಬಾನಿ ಪ್ರತಿಕ್ರಿಯೆ ನೀಡಿದ್ದು ನನ್ನ ಬಳಿ ಈಗಾ ಏನು ಇಲ್ಲ.
ಸದ್ಯ ನನ್ನ ಜೀವನಶೈಲಿಯೂ ಸರಳವಾಗಿದೆ. ಕನಿಷ್ಠ ವೆಚ್ಚದಲ್ಲಿ ಜೀವನ ಸಾಗಿಸುತ್ತಿದ್ದೇನೆ.
ಅದನ್ನು ನನ್ನ ಪತ್ನಿ ಮತ್ತು ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
PublicNext
26/09/2020 03:47 pm