ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಕ್ಸಂಬಾ : ರಾಜ್ಯದಾದ್ಯಂತ ಶೀಘ್ರದಲ್ಲಿ ಜೊಲ್ಲೆ ಉದ್ಯೋಗ ಶಾಖೆ ವಿಸ್ತರಣೆ

ವರದಿ : ವಿನಾಯಕ್ ಮೇತ್ರೆ

ಯಕ್ಸಂಬಾ (ಚಿಕ್ಕೋಡಿ ) : ಜೊಲ್ಲೆ ಉದ್ಯೋಗ ಸಮೂಹದ ಅಂಗಸಂಸ್ಥೆ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ ವತಿಯಿಂದ ರಾಜ್ಯಾದ್ಯಂತ ಜ್ಯೋತಿ ಕ್ರಡಿಟ್ ಹಾಗೂ ಬಜಾರ ಶಾಖೆಗಳನ್ನು ಆರಂಭ ಮಾಡಲು ಚಿಂತನೆ ನಡೆಸಲಾಗಿದೆ.

ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಗಳು ಮುನ್ನಡೆದಿದ್ದು, ಸಂಸ್ಥೆಯು ಪ್ರಸಕ್ತ ವರ್ಷದಲ್ಲಿ 1.01 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬಸವಜ್ಯೋತಿ ಯುಥ್ ಫೌಂಡೇಶನ ಅಧ್ಯಕ್ಷರು ಹಾಗೂ ಸಂಸ್ಥೆಯ ನಿರ್ದೇಶಕ ಬಸವಪ್ರಸಾದ ಜೊಲ್ಲೆ ತಿಳಿಸಿದರು.

ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯ ಜೊತೆಗೆ ಇದರ ಅಡಿಯಲ್ಲಿ 17 ಜ್ಯೋತಿ ಬಜಾರ ಆರಂಭ ಮಾಡಲಾಗಿದೆ. ಬರುವ ದಿನಗಳಲ್ಲಿ 18 ಹೊಸ ಶಾಖೆಗಳನ್ನು ಆರಂಭ ಮಾಡುವ ಸಂಕಲ್ಪ ಇಟ್ಟುಕೊಳ್ಳಲಾಗಿದೆ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಡೆಯುವ ಶ್ರೀ ಬೀರೇಶ್ವರ ಸೌಹಾರ್ದ ಕ್ರೆಡಿಟ್ ಸಹಕಾರಿಯು ಈಗಾಗಲೇ ಹೆಮ್ಮರವಾಗಿ ಬೆಳೆದು ನಿಂತಿದೆ. ಅದೇ ಮಾದರಿಯಲ್ಲಿ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯು ಬೆಳವಣಿಗೆ ಕಾಣಲಿದೆ. ಮುಂದಿನ ತಿಂಗಳು ಬಾಗಲಕೋಟ ಜಿಲ್ಲೆಯ ಮುಧೋಳ, ಶಿರೋಳ,ಲೋಕಾಪೂರ ಮತ್ತು ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದಲ್ಲಿ ನಾಲ್ಕು ಹೊಸ ಶಾಖೆಗಳನ್ನು ಆರಂಭ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಖೊತ, ಉಪಾಧ್ಯಕ್ಷ ಬಾಬುರಾವ ಮಾಳಿ, ಸಿಇಒ ಡಾ, ವಿವೇಕಾನಂದ ಬಂಕೊಳ್ಳಿ, ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಭಾವಿ, ಅಧಿಕಾರಿಗಳಾದ ಸಂತೋಷ ಪಾಟೀಲ, ತಾನಾಜಿ ಶಿಂಧೆ, ಬಿ.ಎ.ಪೂಜಾರಿ ಮುಂತಾದವರು ಇದ್ದರು.

Edited By :
PublicNext

PublicNext

14/05/2022 05:54 pm

Cinque Terre

43.32 K

Cinque Terre

1