ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರವೊಂದಕ್ಕೆ ಕಾಂಡೋಂ ಕಟ್ಟಿ ಹರಕೆ! ಉತ್ತಮ ಪಾಟ್ನರ್ ಆಯ್ಕೆಗಾಗಿ ವಿಚಿತ್ರ ಪದ್ದತಿ…

ಫೆಬ್ರವರಿ ತಿಂಗಳು ಅಂದ್ರೆ ಎಲ್ಲರ ತಲೆಯಲ್ಲಿ ಬರೋದು ವ್ಯಾಲಂಟೈನ್ಸ್ ಡೇ ಈ ದಿನವನ್ನು ಹೇಗೆಲ್ಲಾ ಸಂಭ್ರಮಿಸಬೇಕು, ಯಾವೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂದು ಯೋಚಿಸುವವರ ಮಧ್ಯೆ ಈ ವರ್ಷವಾದರೂ ನನಗೂ ಒಬ್ಬ ವ್ಯಾಲಂಟೈನ್ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿರುವವರು ಇದ್ದಾರೆ.ಇದೇಲ್ಲದರ ಮಧ್ಯೆ ಸಿಂಗಲ್ಸ್ ಗಳಿಗೂ ಒಳ್ಳೆಯ ಪಾಟ್ನರ್ ಸಿಗಲಿ ಎಂದು ದೆಹಲಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಕೆಲ ವರ್ಷದ ಹಿಂದಿನವರೆಗೆ ವರ್ಜಿನ್ ಟ್ರೀ ಪೂಜೆ ಮಾಡುವ ಪದ್ಧತಿ ಆಚರಣೆಯಲ್ಲಿತ್ತು. ಈ ಮರಕ್ಕೆ ಸಿಂಗಲ್ಸ್ ಕಾಂಡೋಂ ಕಟ್ಟುತ್ತಿದ್ದರು. ಇದರ ಹಿಂದೆ ವಿಶೇಷ ಕಾರಣವೂ ಇತ್ತು. ಆದರೆ ಕೆಲ ವರ್ಷದ ಹಿಂದೆ ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ.

ವಿದ್ಯಾರ್ಥಿನಿಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಪದ್ದತಿಗೆ ಬ್ರೇಕ್ ಹಾಕಲಾಗಿದೆ. ಕೆಲ ವರ್ಷದ ಹಿಂದೆ ದೆಹಲಿ ಯೂನಿವರ್ಸಿಟಿಯ ಕ್ಯಾಂಪಸ್ ನಲ್ಲಿ ದೊಡ್ಡದೊಂದು ಮರವಿತ್ತು. ಇದನ್ನು ವರ್ಜಿನ್ ಟ್ರೀ ಎಂದೇ ಕರೆಯಲಾಗುತ್ತಿತ್ತು. ಈ ಮರಕ್ಕೆ ಸಿಂಗಲ್ ಆಗಿದ್ದ ವಿದ್ಯಾರ್ಥಿಗಳು ಪ್ರೇಮಿಗಳ ದಿನದಂದು ಕಾಂಡೋಂ ಕಟ್ಟಿದರೆ ವ್ಯಾಲಂಟೈನ್ಸ್ ಡೇಯೊಳಗೆ ಅವರಿಗೂ ಒಳ್ಳೆಯ ಪಾಟ್ನರ್ ಸಿಗುತ್ತಾರೆ ಎನ್ನುವ ನಂಬಿಕೆ ಇತ್ತು.ಇದೇ ಕಾರಣದಿಂದ ಈ ವರ್ಜಿನ್ ಟ್ರೀ ಕ್ಯಾಂಪಸ್ ನಲ್ಲಿ ಬಹಳ ಫೇಮಸ್ ಆಗಿತ್ತು.ಆದರೆ ಅನೇಕ ವಿದ್ಯಾರ್ಥಿನಿಯರು ಇದು ಸ್ತ್ರೀಯರಿಗೆ ಮಾಡುವ ಅವಮಾನ ಎಂದು ವಿರೋಧಿಸಿದ್ದಕ್ಕೆ ಈ ಪದ್ಧತಿ ಬಂದ್ ಆಗಿದೆ.

ಈ ವರ್ಜಿನ್ ಟ್ರೀ ಶೇಪ್ V ಆಕಾರದಲ್ಲಿತ್ತು. ಮರಕ್ಕೆ ವಿಶೇಷ ಪೂಜೆ ಮಾಡಲಾಗುತ್ತಿತ್ತು. ಈ ಕಾಲೇಜಿನ ಮಿಸ್ ಹಾಗೂ ಮಿಸ್ಟರ್ ಫ್ರೆಶರ್ ನಿಂದ ಪೂಜೆ ಮಾಡಿಲಾಗುತ್ತಿತ್ತು. ಆದರೆ ಭಾರೀ ವಿರೋಧದ ಹಿನ್ನೆಲೆ ಈ ಪೂಜೆ ಸ್ಥಗಿತಗೊಳಿಸಲಾಯ್ತು. ಈ ಪದ್ಧತಿ ಕೊನೆಯಾಗಿದ್ದರೂ ಕ್ಯಾಂಪಸ್ ನಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಈಗಲೂ ನಡೆಯುತ್ತಿರುತ್ತದೆ.

Edited By : Nirmala Aralikatti
PublicNext

PublicNext

09/02/2021 03:28 pm

Cinque Terre

55.13 K

Cinque Terre

2