ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ರಾಸ್ ಪ್ರಕರಣ : ಚರ್ಚೆಗೆ ಕಾರಣವಾಯ್ತು ಯೋಗಿ ಆದಿತ್ಯನಾಥ್ ಟ್ವೀಟ್

ಲಖನೌ : ದೇಶದಾದ್ಯಂತ ಚರ್ಚೆಗೆ ಗುರಿಯಾಗಿರುವ ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿಂದತೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿರುವ ಎರಡು ಟ್ವೀಟ್ ತೀವ್ರ ಚರ್ಚೆಗೆ ಕಾರಣವಾಗಿದೆ.

ಒಂದು ಟ್ವೀಟ್ ನಲ್ಲಿ ಯೋಗಿ ಆದಿತ್ಯನಾಥ್ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ, ಮತ್ತೊಂದು ಟ್ವೀಟ್ ನಲ್ಲಿ ಪೊಲೀಸರಿಗೆ ಸಲಹೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ತಮ್ಮ ಮೊದಲನೇ ಟ್ವೀಟ್ ನಲ್ಲಿ ವಿಪಕ್ಷಗಳ ಪ್ರತಿಭಟನೆಗಳನ್ನು ಟೀಕಿಸಿರುವ ಯೋಗಿ ಆದಿತ್ಯನಾಥ್, ಇಡೀ ಘಟನೆಯನ್ನು ರಾಜಕೀಯಕರಣಗೊಳಿಸುತ್ತಿರುವ ನಡೆಯನ್ನು ಖಂಡಿಸಿದ್ದಾರೆ.

ವಿಪಕ್ಷಗಳು ಘಟನೆಯನ್ನೇ ನೆಪ ಮಾಡಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿವೆ.

ಅಭಿವೃದ್ಧಿ ಬಯಸದ ಈ ಶಕ್ತಿಗಳು ರಾಜ್ಯದಲ್ಲಿ ಕೋಮು ಘರ್ಷಣೆಯನ್ನು ಬಯಸುತ್ತಿವೆ ಎಂದು ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.

ಘಟನೆಯನ್ನು ಮುಂದಿಟ್ಟುಕೊಂಡು ಜನರ ನಡುವೆ ಕೊಳ್ಳಿ ಹಚ್ಚುವ ಕೆಲಸದಲ್ಲಿ ನಿರತವಾಗಿರುವ ವಿಪಕ್ಷಗಳ ಹುನ್ನಾರ ಫಲಿಸದು ಎಂದಿದ್ದಾರೆ.

ಇದೇ ವೇಳೆ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸೂಕ್ಷ್ಮಮತಿಗಳಾಗುವಂತೆ ಪೊಲೀಸರಿಗೆ ಯೋಗಿ ಆದಿತ್ಯನಾಥ್ ಸಲಹೆ ನೀಡಿದ್ದಾರೆ.

ಅತ್ಯಾಚಾರ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಇತರ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚಿನ ಕಾಳಜಿ ಮತ್ತು ಸಂಯಮದಿಂದ ವರ್ತಿಸುವ ಅವಶ್ಯಕತೆ ಇದೆ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

Edited By : Nirmala Aralikatti
PublicNext

PublicNext

05/10/2020 04:01 pm

Cinque Terre

62.65 K

Cinque Terre

3