ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿರಿಯ ನಟ ರಾಕ್ ಲೈನ್ ಸುಧಾಕರ್ ವಿಧಿವಶ

ಶೂಟಿಂಗ್ ವೇಳೆ ಹೃದಯಾಘತ ಸಂಭವಿಸಿ ಹಿರಿಯ ನಟ ರಾಕ್ಲೈನ್ ಸುಧಾಕರ್ ನಿಧನರಾಗಿದ್ದಾರೆ.

ಕಾಮಿಡಿ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಪೋಷಕ ಪಾತ್ರ ನಿರ್ವಹಿಸಿದ ಅವರ ಅಗಲಿಕೆ ಇಡೀ ಚಿತ್ರರಂಗವೇ ತುಂಬಲಾರದ ನಷ್ಟವಾಗಿದೆ.

ಕೆಲ ದಿನಗಳ ಹಿಂದಷ್ಟೇ ಸುಧಾಕರ್ ಗೆ ಕೊರೊನಾ ಸೋಂಕು ತಗುಲಿತ್ತು. ಇದಕ್ಕಾಗಿ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು.

ಸಿಂಪಲ್ ಸುನಿ ನಿರ್ದೇಶನದ ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಹೃದಯಾಘತ ಸಂಭವಿಸಿದೆ. ಈ ಕುರಿತು ಖುದ್ದು ಟ್ವೀಟ್ ಮೂಲಕ ನಿರ್ದೇಶಕ ಸುನಿ ಮಾಹಿತಿ ನೀಡಿದ್ದಾರೆ.

ಟೋಪಿವಾಲಾ, ಜೂಮ್, ಚಮಕ್, ಪಟಾಕಿ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಕ್ ಲೈನ್ ಸುಧಾಕರ್ ನಟಿಸಿದ್ದರು.

Edited By : Nirmala Aralikatti
PublicNext

PublicNext

24/09/2020 11:59 am

Cinque Terre

127.27 K

Cinque Terre

32