ನವದೆಹಲಿ: ಕೋವಿಡ್ ಕಂಟಕದ ನಡುವೆಯೂ ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಭಾರತೀಯ ರೇಲ್ವೆ ಇಲಾಖೆ ಪ್ರಯಾಣಿಕರಿಗೆ ವಿಶೇಷ ಗಿಫ್ಟ್ ನೀಡಿದೆ.
ಅಕ್ಟೋಬರ್ 15ರಿಂದ ಹಬ್ಬದ ಪ್ರಯುಕ್ತ ದೇಶಾದ್ಯಂತ 200 ವಿಶೇಷ ಶ್ರಮಿಕ್ ರೈಲುಗಳು ಸಂಚರಿಸಲಿವೆ.
ಈ ಬಗ್ಗೆ ಭಾರತೀಯ ರೇಲ್ವೆ ಮಂಡಳಿಯ ಸಿಇಓ ವಿ.ಕೆ ಯಾದವ್ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಪ್ರತಿವರ್ಷವೂ ದಸರಾ ಹಬ್ಬ, ದುರ್ಗಾ ಪೂಜೆ, ದೀಪಾವಳಿ ಅವಧಿಯಲ್ಲಿ ವಿಶೇಷ ರೈಲುಗಳು ಸಂಚರಿಸುತ್ತಿದ್ದವು.
ಈ ಬಾರಿ ಕೊವಿಡ್-19 ಸೋಂಕಿನ ಭೀತಿಯಲ್ಲಿ ರೈಲು ಸಂಚಾರವನ್ನೇ ಸ್ಥಗಿತಗೊಳಿಸಿದ್ದು, ಶ್ರಮಿಕ್ ರೈಲುಗಳ ಪ್ರಯಾಣಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.
PublicNext
05/10/2020 07:50 am