ವಯೋವೃದ್ಧರೊಬ್ಬರು ಮನೆಯಲ್ಲಿ ತೇವದ ಬಟ್ಟೆಯಿಂದ ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟಾಪ್ ಬಾಕ್ಸ್ ಸ್ವಚ್ಛಗೊಳಿಸುವ ವೇಳೆ ವಿದ್ಯುತ್ ಶಾಕ್ ಹೊಡೆದು ವಯೋವೃದ್ಧೆ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಕೊರಟಗೆರೆ ತಾಲೂಕಿನ ಚೆನ್ನರಾಯನದುರ್ಗ ಹೋಬಳಿಯ ಸೂರ್ಯನ ಹಳ್ಳಿ ಗ್ರಾಮದ 65 ವರ್ಷದ ಮಂಗಳಮ್ಮ ಮೃತ ದುರ್ದೈವಿ. ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಂತಹ ವೃದ್ಧೆಯನ್ನು ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ವೈದ್ಯರು ವಯೋವೃದ್ದೆ ಮೃಪಟ್ಟಿರುವುದಾಗಿ ಪರೀಕ್ಷಿಸಿ ತಿಳಿಸಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
14/07/2022 01:36 pm