ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ: ಬಾಲ ಗಣೇಶನನ್ನ ನಂಬೋರು ಇಲ್ಲಿ ಘಂಟೆ ಕಟ್ಟುತ್ತಾರೆ !

ಅದೊಂದು ಪುಟ್ಟ ಗ್ರಾಮ. ಅದರ ಹೆಸರು ಕೂಡ ತುಂಬಾ ಚೆಂದ. ಹೌದು. ಉತ್ತರ ಕನ್ನಡ ಜಿಲ್ಲೆ ಯಲ್ಲಾಪೂರ ತಾಲೂಕಿನಲ್ಲಿಯೆ ಈ ಒಂದು ಗ್ರಾಮ ಇದೆ. ಹೆಸರು ಚಂದಗುಳಿ ಗ್ರಾಮ ಅಂತ. ಈ ಚಂದಗುಳಿ ಗ್ರಾಮದಲ್ಲಿಯೆ ಬಾಲ ಗಣೇಶ ನೆಲೆಸಿದ್ದಾನೆ.

ಈತನ ನಂಬಿದೋರು ಬಿ.ಎಸ್.ಯಡಿಯೂರಪ್ಪ,ಕುಮಾರ್ ಸ್ವಾಮಿ,ಎಸ್.ಎಂ.ಕೃಷ್ಣ. ಇವರೆಲ್ಲ ನಂಬಿದ ಈ ಗಣೇಶನನ್ನ ಘಂಟಿ ಗಣೇಶ ಅಂತಲೂ ಕರೆಯುತ್ತಾರೆ.ಇದರ ಸುತ್ತದ ನಿಮ್ಮ ಪಬ್ಲಿಕ್ ನೆಕ್ಟ್ಸ್‌ನ ವಿಶೇಷ ಇಲ್ಲಿದೆ.

ಘಂಟಿ ಗಣೇಶ ದೇವಸ್ಥಾನ ತುಂಬಾ ಹಳೆಯ ದೇವಸ್ಥಾನ. ಆದರೆ, ಈಗ ಇದು ಅಭಿವೃದ್ಧಿ ಆಗಿದೆ. ಚಂದ ಹೆಸರಿನ ಚಂದದ ಊರಿನ ಈ ಗಣೇಶನನ್ನ ನಂಬುವವರು ಇಲ್ಲಿ ಘಂಟೆಯ ಹರಕೆಯನ್ನೂ ಕಟ್ಟುತ್ತಾರೆ. ಭಟ್ಟರ ಹೇಳುವಂತೆ, ಹರಕೆ ತೀರಿಸೋ ಭಕ್ತರು ಇಲ್ಲಿ ಘಂಟೆ ಕಟ್ಟಿ ಹೋಗುತ್ತಾರೆ.

ಅದಕ್ಕೇನೆ ಈ ದೇವಸ್ಥಾನದ ತುಂಬೆಲ್ಲ ಘಂಟೆಗಳೇ ಇವೆ. ಇಂತಹ ವಿಶೇಷ ದೇವಸ್ಥಾನಕ್ಕೆ ದೂರದ ಊರಿಂದ ಭಕ್ತರು ಬಂದು ಹೋಗುತ್ತಾರೆ.

ಈ ದೇವಸ್ಥಾನದ ಯಲ್ಲಾಪುರದಿಂದ ಕೇವಲ 16 ಕಿಲೋಮೀಟರ್ ದೂರದಲ್ಲಿಯೇ ಇದ್ದು, ಇಲ್ಲಿ ಹರಕೆ ಕಟ್ಟಿಕೊಂಡರೆ, ಅದು ನಿಜವಾಗುತ್ತದೆ ಅನ್ನೋ ನಂಬಿಕೆ ಇದೆ. ಆ ನಂಬಿಕೆಯಿಂದಲೇ ನಿತ್ಯವೂ ಇಲ್ಲಿ ಭಕ್ತರ ದಂಡೆ ಹರಿದು ಬರುತ್ತದೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್‌ ಬ್ಯೂರೋ,ಪಬ್ಲಿಕ್ ನೆಕ್ಸ್ಟ್‌

Edited By :
PublicNext

PublicNext

06/06/2022 06:16 pm

Cinque Terre

64.78 K

Cinque Terre

11