ಇತ್ತಿಚೆಗೆ ರೈಲು ನಿಲ್ದಾಣಗಳಲ್ಲಿ ಅನೇಕರ ಪ್ರಾಣ ಉಳಿಸುವ ಮೂಲಕ ರೈಲ್ವೆ ಪೊಲೀಸರು ಸಾಕಷ್ಟು ಪ್ರಸಂಶೆ ಪಡೆದಿದ್ದಾರೆ. ಸದ್ಯ ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಕಾನ್ಸ್ ಟೇಬಲ್ ಯೊಬ್ಬರು ತಲೆ ಸುತ್ತಿ ಚಲಿಸುವ ರೈಲಿಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹೌದು ಸಾವು ಯಾರಿಗೆ, ಯಾವಾಗ ಮತ್ತು ಹೇಗೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ. ಇಂದು ಚೆನ್ನಾಗಿರೋರು ನಾಳೆ ಇರಲ್ಲ. ಅಂತಹದೇ ಒಂದು ಘಟನೆ ಇದಾಗಿದೆ. ಸುಮ್ಮನೆ ಪ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದ ರೈಲ್ವೆ ಪೊಲೀಸ್ ಕಾನ್ಸ್ ಟೇಬಲ್ ಯೊಬ್ಬರು ತಲೆ ಸುತ್ತುವ ಅನುಭವವಾಗಿ ಚಲಿಸುತ್ತಿದ್ದ ರೈಲ್ವೆ ಹಳಿಗಳ ಮೇಲೆ ಬಿದ್ದು, ಸಾವನ್ನಪ್ಪಿರುವಂತಹ ಭಯಾನಕ ವಿಡಿಯೋ ವೈರಲ್ ಆಗಿದೆ.
ಮೃತ ರೈಲ್ವೆ ಪೊಲೀಸ್ ಕಾನ್ಸ್ ಟೇಬಲ್ ನ್ನು ರಾಜಾ ಕಿ ಮಂಡಿ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಜಿಆರ್ಪಿ ಕಾನ್ ಸ್ಟೆಬಲ್ ಆಗಿರುವ ರಿಂಗೆಲ್ ಸಿಂಗ್ (34) ಎಂದು ಗುರುತಿಸಲಾಗಿದೆ.
PublicNext
29/03/2022 01:58 pm