ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾಂವ: ಮಳೆ ಅವಾಂತರ ಮನೆಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿದ ಯುವಕ

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಮನೆಗೋಡೆ ಕುಸಿದು ಮನೆಯಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾದ ಶಿಗ್ಗಾಂವ ತಾಲ್ಲೂಕಿನ ಕುನ್ನೂರ ಗ್ರಾಮದಲ್ಲಿ ನಡೆದಿದೆ.

ಹೌದು..28 ವಯಸ್ಸಿನ ಮುಸ್ತಾಕ ಯರಗುಪ್ಪಿ ಎಂಬ ಯುವಕ ಸಾವನ್ನಪ್ಪಿದ ದುರ್ದೈವಿ. ಈಗಾಗಲೇ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ನೆನೆದಿದ್ದ ಮನೆಗೋಡೆ ಮಧ್ಯ ರಾತ್ರಿ 2 ಗಂಟೆಗೆ ಮನೆ ಒಳಗೆ ಮಲಗಿದ ಮುಸ್ತಾಕ್ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ, ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇನ್ನುಳಿದ ತಂದೆ, ತಾಯಿ, ಹೆಂಡತಿ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈತನಿಗೆ 2 ವರ್ಷದ ಗಂಡು ಮಗು ಮತ್ತು ಕೇವಲ 12 ದಿನದ ಹೆಣ್ಣು ಮಗಳಿದ್ದಾಳೆ. ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮ ಪಂಚಾಯತಿ ಪಿಡಿಓ ಮತ್ತು ಅಧ್ಯಕ್ಷರು, ಸದಸ್ಯರು ಮುಸ್ತಾಕ್ ಮನೆಗೆ ಭೇಟಿ ನೀಡಿ ಪರಿಹಾರ ಒದಗಿಸಿಲು ಸರ್ಕಾರಕ್ಕೆ ತಿಳಿಸುತ್ತಿದ್ದಾರೆ.

Edited By :
PublicNext

PublicNext

10/08/2022 03:23 pm

Cinque Terre

77.42 K

Cinque Terre

1