ಪ್ಯಾರಿಸ್ / ಬರ್ಲಿನ್ : ಕೊರೊನಾ ವೈರಸ್ 2ನೇ ಅಲೆ ಯುರೋಪ್ ದೇಶದಲ್ಲಿ ಕಾಣಿಸಿಕೊಂಡಿದ್ದು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಕಂಡು ಬರುತ್ತಿದ್ದು ಐರೋಪ್ಯ ದೇಶಗಳು ಕೊರೊನಾ ಹೊಡೆತಕ್ಕೆ ಮತ್ತೆ ಮರುಗಟ್ಟಿವೆ.
ಈಗಾಗಲೇ ಫ್ರಾನ್ಸ್, ಜರ್ಮನಿ, ಬ್ರಿಟನ್, ಇಟಲಿ, ಸ್ಪೇನ್, ಬೆಲ್ಜಿಯಂ, ಚೆಕ್ ಗಣರಾಜ್ಯ ಪೋಲೆಂಡ್ ಅತಿ ಹೆಚ್ಚಿನ ಪ್ರಕರಣ ಕಂಡು ಬರುತ್ತಿದ್ದು ಫ್ರಾನ್ಸ್ ಜರ್ಮನಿಯಲ್ಲಿ ಮತ್ತೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬ್ರೀಟನ್, ಸ್ಪೇನ್ ಇಟಲಿ, ಚೆಕ್ ಗಣರಾಜ್ಯದಲ್ಲಿ ಕೆಲವೊಂದು ಕಟ್ಟು ನಿಟ್ಟಿನ ನಿರ್ಬಂಧ ಹೇರಲಾಗಿದೆ.
ಫ್ರಾನ್ಸ್ ನಲ್ಲಿ ಶುಕ್ರವಾರದಿಂದ ಡಿ.1 ರ ವರೆಗೆ ಲಾಕ್ ಡೌನ್ ನಿರ್ಧಾರವನ್ನ ಫ್ರಾನ್ಸ್ ಅಧ್ಯಕ್ಷ ಎಮಾನ್ಯೃಯೆಲ್ ಮ್ಯಾಕ್ರೋನ್ ತಿಳಿಸಿದ್ದಾರೆ.
ಜರ್ಮನಿಯಲ್ಲಿ ನ.2 ರಿಂದ ಸರಳ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಆ ಪ್ರಕಾರ ರೆಸ್ಟೋರೆಂಟ್, ಪಬ್ , ಸಿನಿಮಾ ಮಂದಿರ, ಸೇರಿದಂತೆ ಜನ ಸಂದಣಿಯ ಪ್ರದೇಶಗಳಲ್ಲಿ 10 ಕ್ಕಿಂತ ಅಧಿಕ ಜನರಿಗೆ ಪ್ರವೇಶ ನಿಷೇಧಿಸಲಾಗಿದೆ.
ಇಟಲಿಯಲ್ಲಿ ಕೊರೊನಾ ಪ್ರಕರಣ ಹಿನ್ನಲೆಯಲ್ಲಿ ಸಂಜೆ 6 ರಿಂದ ಎಲ್ಲ ಬಾರ್, ರೆಸ್ಟೋರೆಂಟ್, ಜಿಮ್, ಈಜುಕೊಳ, ರಂಗಮಂದಿರ, ವಿವಾಹ, ಅಂತ್ಯಕ್ರಿಯೆ, ಧಾರ್ಮಿಕ ಕಾರ್ಯಕ್ರಮ ಹಬ್ಬ ನಿಷೇಧಿಸಿ ಶಾಲಾ ಕಾಲೇಜುಗಳಿಗೆ ಅವಕಾಶ ನೀಡಿದೆ. ಸ್ಪೇನ್ ನಲ್ಲಿ ಕೊರೊನಾ ಹತ್ತಿಕ್ಕಲು ಅ.25 ರಿಂದ ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಿ ರಾತ್ರಿ 11 ರಿಂದ ಬೆಳಿಗ್ಗೆ 6 ವರೆಗೆ ಮನೆಯಿಂದ ಹೊರ ಬರುವಂತಿಲ್ಲ.
PublicNext
30/10/2020 11:26 am