ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿರೋಧದ ನಡುವೆ ಲೋಕಸಭೆಯಲ್ಲಿ 2 ಮಸೂದೆಗೆ ಅಂಗೀಕಾರ

ನವದೆಹಲಿ : ಎನ್ ಡಿಎ ಮಿತ್ರ ಪಕ್ಷ ಶಿರೋಮಣಿ ಅಕಾಲಿದಳ ಹಾಗೂ ವಿಪಕ್ಷಗಳ ಪ್ರತಿಭಟನೆ, ಭುಗಿಲೆದ್ದ ವಿರೋಧದ ಆಕ್ರೋಶ ಹೋರಾಟಗಳ ನಡುವೆ ಕೃಷಿ ಕ್ಷೇತ್ರದ ಎರೆಡು ಮಸೂದೆಗಳಿಗೆ ಲೋಕಸಭೆ ಅಂಗೀಕಾರ ಪಡೆಯುವಲ್ಲಿ ಕೇಂದ್ರ ಸರ್ಕಾರ ವಿಜಯವಾಗಿದೆ.

ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ, ಮತ್ತು ರೈತರ ಸೇವೆಗಳ ಒಪ್ಪಂದ ಮಸೂದೆ, ಲೋಕಸಭೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆದುಕೊಂಡಿದೆ. ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷಗಳು ಮಸೂದೆ ವಿರೋಧಿಸಿ ಸಭಾತ್ಯಾಗ ಕೈಗೊಂಡವು.

ಈ ಮೊದಲು ಮಂಗಳವಾರ ಕೃಷಿ ಕ್ಷೇತ್ರಕ್ಕೆ ಮತ್ತೊಂದು ಮಸೂದೆ ಅಗತ್ಯ ಸರಕುಗಳ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಸುಗ್ರೀವಾಜ್ಞೆಗಳ ಮೂಲಕ ಈ ಎಲ್ಲಾ ಮಸೂದೆಗಳನ್ನು ಜಾರಿಗೆ ಮಾಡಲಾಗಿತ್ತು.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆ ಅಂಗೀಕಾರವನ್ನು ಹೊಗಳಿರುವ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಿತ ಮಸೂದೆಗಳನ್ನು ಐತಿಹಾಸಿಕ ಎಂದು ವರ್ಣಿಸಿದ್ದು ಮಸೂದೆಯಿಂದ ರೈತರಿಗೆ ಲಾಭ ಹೆಚ್ಚಿನ ಲಾಭ ಸಿಗಲಿದೆ ಎಂದಿದ್ದಾರೆ ಆದ್ರೆ ಕೆಲವು ಶಕ್ತಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮೋದಿ ಮಸೂದೆ ವಿರೋಧಿ ಟೀಕೆ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

18/09/2020 07:42 pm

Cinque Terre

79.56 K

Cinque Terre

0