ಸ್ಟಾಕ್‌ಹೋಮ್: ಮಹಿಳಾ ವಿಜ್ಞಾನಿ ಸೇರಿ ಅಮೆರಿಕದ ಮೂವರಿಗೆ 2020ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ರೋಜರ್ ಪೆನ್ರೋಸ್, ರೀನ್ಹಾರ್ಡ್ ಗಂಗಲ್ ಮತ್ತು ಆಂಡ್ರಿಯಾ ಗೇಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಆಲ್ಬರ್ಟ್ ಐನ್‌ಸ್ಟೈನ್‌ರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (Albert Einstein’s General Theory of Relativity) ದ ಬಗ್ಗೆ ತಿಳಿಯಲು ಗಣಿತ ವಿಧಾನವನ್ನು ಸಿದ್ಧಪಡಿಸಿದ್ದಕ್ಕಾಗಿ ರೋಜರ್ ಪೆನ್ರೋಸ್‌ಗೆ ಪ್ರಶಸ್ತಿ ನೀಡಲಾಗುವುದು. ಅದೇ ಸಮಯದಲ್ಲಿ, ಕಪ್ಪು ಕುಳಿ ಮತ್ತು ಮೀಲ್ಕಿ ವೇ milky way ರಹಸ್ಯಗಳನ್ನು ವಿವರಿಸಿದ ಗೆಂಗೆಲ್ ಮತ್ತು ಗೇಜ್ ಅವರಿಗೆ ಜಂಟಿಯಾಗಿ ನೊಬೆಲ್ ನೀಡಲಾಗುತ್ತದೆ.
ಪ್ರಶಸ್ತಿಯ ಅರ್ಧ ಮೊತ್ತ ರೋಜರ್ ಪೆನ್ರೋಸ್ ಹಾಗೂ ಉಳಿದ ಅರ್ಧ ಭಾಗವನ್ನು ರೈನ್‌ಹಾರ್ಡ್ ಗೆಂಜೆಲ್ ಮತ್ತು ಆ್ಯಂಡ್ರಿಯಾ ಘೇಜ್ ಅವರಿಗೆ ಹಂಚಿಕೆಯಾಗಲಿದೆ. 1901ರಿಂದ ಇಲ್ಲಿಯವರೆಗೆ 113 ಬಾರಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿದ್ದು, 212 ಜನರಿಗೆ ಪುರಷ್ಕಾರ ಲಭಿಸಿದೆ.
PublicNext
06/10/2020 06:22 pm