ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಒಟ್ಟು 58 ದೇಶಗಳಿಗೆ ಭೇಟಿ ನೀಡಿದ್ದು, ಇದಕ್ಕಾಗಿ ಬರೋಬ್ಬರಿ 517 ಕೋ.ರೂ. ಖರ್ಚಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.
ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ವಿ ಮುರಳೀಧರನ್ 2015 ರಿಂದ ಈವರೆಗೆ ನಡೆಸಿರುವ ವಿದೇಶ ಪ್ರಯಾಣಗಳ ವರದಿಯನ್ನು ರಾಜ್ಯ ಸಭೆಗೆ ಸಲ್ಲಿಸಿದ್ದಾರೆ.
ವರದಿಯ ಪ್ರಕಾರ ಯುಎಸ್, ರಷ್ಯಾ ಮತ್ತು ಚೀನಾಗೆ ತಲಾ 5 ಬಾರಿ ಭೇಟಿ ನೀಡಿದ್ದು, ಸಿಂಗಾಪೂರ್, ಜರ್ಮನಿ, ಫ್ರಾನ್ಸ್, ಶ್ರೀಲಂಕಾ ಮತ್ತು ಯುಎಇಗೆ ಹಲವು ಬಾರಿ ಪ್ರಧಾನಿ ಮೋದಿ ಪ್ರಯಾಣ ಬೆಳೆಸಿದ್ದಾರೆ.
ಇವುಗಳಲ್ಲಿ ಕೆಲವು ಬಾರಿ ಒಂದೇ ಪ್ರವಾಸದಲ್ಲಿ ಹಲವು ದೇಶಗಳಿಗೆ ಭೇಟಿ ನೀಡಲಾಗಿದೆ.
ಕೆಲವು ಬಾರಿ ಒಂದು ಪ್ರಯಾಣದಲ್ಲಿ ಒಂದೇ ದೇಶಕ್ಕೆ ಭೇಟಿ ನೀಡಿದ್ದಾರೆ.
ಇನ್ನು ಪ್ರಧಾನಿ ಮೋದಿ ಕೊನೆಯ ಬಾರಿಗೆ ಬ್ರಿಕ್ಸ್ ಸಮಾವೇಶಕ್ಕಾಗಿ ಬ್ರೆಜಿಲ್ ದೇಶಕ್ಕೆ 2019 ರ ನವೆಂಬರ್ 13-14 ರಂದು ಪ್ರವಾಸ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.
PublicNext
23/09/2020 07:51 am