ಹುಬ್ಬಳ್ಳಿ : ಔದ್ಯಮಿಕ, ಧಾರ್ಮಿಕ, ವೈದ್ಯಕೀಯ, ಮೂಲಭೂತ ಹಾಗೂ ಹೊಟೇಲ್ ಉದ್ಯಮದ ಮೂಲಕ ಹುಬ್ಬಳ್ಳಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಖ್ಯಾತಿ ಪಡೆದಿದ್ದ ಆರ್. ಎನ್ ಶೆಟ್ಟಿ ಗುರುವಾರ ನಸುಕಿನ ಜಾವ 2 ಗಂಟೆಗೆ ಬೆಂಗಳೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ಆರ್ ಎನ್ ಎಸ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮಧ್ಯಾಹ್ನದ ನಂತರ ಸಾರ್ವಜನಿಕ ದರ್ಶನಕ್ಕಾಗಿ ಅವರ ಪಾಥಿವ ಶರೀರವನ್ನು ಇಡಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
1928 ಆಗಸ್ಟ್ 15 ರಂದು ಜನಿಸಿದ್ದ ಇವರು 1961 ರಲ್ಲಿ ಮೂಲಸೌಕರ್ಯ ಕಂಪನಿ ಸ್ಥಾಪಿಸಿ ಹಿಡ್ಕಲ್, ತಟ್ಟಿಹಳ್ಳ, ಸೂಪಾ ಜಲಾಶಯ, ಮಾಣಿ, ವರಾಹಿ ಜಲವಿದ್ಯುತ್ ಯೋಜನೆ ಸೇರಿದಂತೆ ಕೊಂಕಣ ರೈಲು ಮಾರ್ಗದ ಸುರಂಗ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದ್ದರು.
PublicNext
17/12/2020 08:48 am