ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾತ್ಮ ಗಾಂಧೀಜಿ ಮರಿಮೊಮ್ಮಗ ಕೊರೊನಾ ಸೋಂಕಿಗೆ ಬಲಿ

ಜೋಹಾನ್ಸಬರ್ಗ್: ಸ್ವಲ್ಪ ದಿನಗಳಲ್ಲಿ ತಮ್ಮ 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದ ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗ ಸತೀಶ್ ಧುಪೆಲಿಯಾ ಕೊರೊನಾ ಸೋಂಕಿಗೆ ಸೌಥ್ ಆಫ್ರಿಕಾದಲ್ಲಿ ಬಲಿಯಾಗಿದ್ದಾರೆ. ಸೋದರಿ ಉಮಾ ಧುಪೆಲಿಯಾ ಅವರು ಸಹೋದರ ಸತೀಶ್ ಅವರ ಸಾವನ್ನು ಖಚಿತಪಡಿಸಿದ್ದಾರೆ.

ನ್ಯೂಮೇನಿಯಾ ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಕೋವಿಡ್-19 ಸೋಂಕು ಸಹ ತಗುಲಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸೋದದ ಕಾರ್ಡಿಯಾಕ್ ಅರೆಸ್ಟ್ ನಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಪ್ರೀತಿಯ ಅಣ್ಣ ನಮ್ಮನ್ನು ಅಗಲಿದ್ದಾನೆ.ಎಂದು ಉಮಾ ಧುಪೆಲಿಯಾ ಹೇಳಿದ್ದಾರೆ.

ಸತೀಶ್ ಅವರ ಇನ್ನೋರ್ವ ಸೋದರಿ ಕೀರ್ತಿ ಮೆನನ್ ಜೊಹಾನ್ಸಬರ್ಗ್ ನಲ್ಲಿ ವಾಸವಾಗಿದ್ದಾರೆ. ಗಾಂಧೀಜಿ ಅವರ ಸ್ಮರಾಣರ್ಥವಾಗಿ ಕೈಗೊಂಡ ಪ್ರೊಜೆಕ್ಟ್ ಗಳಲ್ಲಿ ಕೀರ್ತಿ ಮೆನನ್ ತೊಡಗಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

23/11/2020 12:00 pm

Cinque Terre

82.4 K

Cinque Terre

4