ಪಾಟ್ನಾ: ಬಿಹಾರದ ಗಯಾ ಜಿಲ್ಲೆಯ ಬಾರಾಚಟ್ಟಿಯಲ್ಲಿ ಇಂದು ನಸುಕಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಭದ್ರತಾ ಪಡೆಗಳು ಮೂವರು ನಕ್ಸಲರನ್ನು ಹೊಡೆದುರುಳಿಸಿವೆ.
ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಗುಂಡಿನ ದಾಳಿ ನಡೆಸಿ ಕೆಲ ಹೊತ್ತಿನ ಬಳಿಕ ಸ್ಥಳ ತಪಾಸಣೆ ನಡೆಸಿದಾಗ ಮೂವರು ನಕ್ಸಲರ ಶವ ಪತ್ತೆಯಾಗಿದೆ. ಬಿಹಾರ ಪೊಲೀಸ್ ಸಿಬ್ಬಂದಿಯ ಸಹಯೋಗ ಹಾಗೂ ಕೋಬ್ರಾ 205ನೇ ಬೆಟಾಲಿಯನ್ ನೇತೃತ್ವದಲ್ಲಿ ಎನ್‌ಕೌಂಟರ್ ನಡೆಸಲಾಗಿದೆ. ಈ ಮೂಲಕ ಎಕೆ ಸರಣಿಯ ಆಕ್ರಮಣಕಾರಿ ರೈಫಲ್ ಮತ್ತು ಐಎನ್‌ಎಸ್ಎಎಸ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
PublicNext
22/11/2020 10:25 am