ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಶಾಲೆಯಲ್ಲಿ 80 ಹಸುಗಳು ಹಠಾತ್ ಸಾವು

ಜೈಪುರ್‌: ಗೋಶಾಲೆಯಲ್ಲಿ 80 ಹಸುಗಳು ಹಠಾತ್ತನೆ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

ಸರ್ದರ್ಶಹರ್ ತಾಲೂಕಿನ ಬಿಲುಬಾಸ್ ರಾಂಪುರದ ಶ್ರೀ ರಾಮ್ ಗೋಶಾಲೆಯಲ್ಲಿ ದುರ್ಘಟನೆ ನಡೆದಿದೆ. ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ತಹಶೀಲ್ದಾರ್ ಕುಟೇಂದ್ರ ಕನ್ವರ್, ವಿಷ ಆಹಾರ ಸೇವನೆ ಅಥವಾ ಕಾಯಿಲೆಗಳಿಂದಾಗಿ ಅನೇಕ ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ತನಿಖಾ ವರದಿ ಬಂದ ನಂತರ ಸಾವಿಗೆ ಕಾರಣಗಳು ಸ್ಪಷ್ಟವಾಗಲಿದೆ ಎಂದು ತಿಳಿಸಿದರು.

Edited By : Vijay Kumar
PublicNext

PublicNext

22/11/2020 09:26 am

Cinque Terre

64.14 K

Cinque Terre

4