ತಿರುವನಂತಪುರಂ: ಬೆಂಗಳೂರಿನ ಉದ್ಯಮಿಯೊಬ್ಬರು ಕೊಚ್ಚಿಯ ಪ್ರಸಿದ್ಧ ಚೋಟ್ಟನ್ನಿಕರ ಭಗವತಿ ದೇಗುಲಕ್ಕೆ 500 ಕೋಟಿ ರೂ. ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಮೂಲದ ಗಣ ಶ್ರವಣ ಎಂಬವರೇ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ನೀಡಲು ಮುಂದಾಗಿರುವ ಉದ್ಯಮಿ. ಆದರೆ ಈ ಕುರಿತು ದೇಗುಲದ ಆಡಳಿತದ ಹೊಣೆ ಹೊತ್ತಿರುವ ಕೇರಳ ದೇವಸ್ವ ಮಂಡಳಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಏಕೆಂದರೆ ಇಷ್ಟೊಂದು ಹಣವನ್ನು ನೀಡುವ ಭರವಸೆ ಇದೇ ಮೊದಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವಸ್ವಂ ಮಂಡಳಿಯ ಕಾರ್ಯದರ್ಶಿ ವಿ.ಎ. ಶೀಲಾ, "ಕಳೆದ ವರ್ಷವೇ ಇಂಥ ಪ್ರಸ್ತಾಪ ನಮ್ಮ ಮುಂದೆ ಬಂದಿತ್ತು. ಆದರೆ ಭಾರೀ ಮೊತ್ತವಾದ ಕಾರಣ ನಾವು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ ನಾವು ಸರ್ಕಾರದ ಮುಂದೆ ವಿಷಯ ಇಟ್ಟಿದ್ದೇವೆ. ಜೊತೆಗೆ ಹೈಕೋರ್ಟ್‌ನಿಂದಲೂ ಅನುಮತಿ ಪಡೆದುಕೊಂಡು ಮುಂದಿನ ಹೆಜ್ಜೆ ಇಡಲಿದ್ದೇವೆ'' ಎಂದು ತಿಳಿಸಿದ್ದಾರೆ.
PublicNext
19/11/2020 02:52 pm