ಮುಂಬೈ: ಶಿವಸೇನೆ ನಾಯಕನ ಒತ್ತಾಯಕ್ಕೆ ಮಣಿದಿರುವ ಬೇಕರಿ ಮಾಲೀಕ, ಕರಾಚಿ ಎಂಬ ಅಕ್ಷರಗಳಿರುವ ನಾಮಫಲಕಕ್ಕೆ ಪೇಪರ್ ಸುತ್ತಿದ್ದಾರೆ.
ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಕರಾಚಿ ಸ್ವೀಟ್ಸ್ ಹೆಸರನ್ನು ಬದಲಾಯಿಸುವಂತೆ ಶಿವಸೇನೆ ನಾಯಕ ನಿತಿನ್ ನಂದಗಾಂವ್ಕರ್ ಬೇಕರಿ ಮಾಲೀಕನಿಗೆ ಒತ್ತಾಯಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂದ್ರಾ ಪ್ರದೇಶದಲ್ಲಿರುವ ಕರಾಚಿ ಸ್ವೀಟ್ಸ್‌ಗೆ ಭೇಟಿ ನೀಡಿದ್ದ ಶಿವಸೇನೆ ನಾಯಕ ನಿತಿನ್ ನಂದಗಾಂವ್ಕರ್, ಪಾಕಿಸ್ತಾನದ ಕರಾಚಿ ನಗರದ ಹೆಸರನ್ನು ತೆಗೆಯುವಂತೆ ಒತ್ತಾಯಿಸಿದ್ದರು. ಅಷ್ಟೇ ಅಲ್ಲದೆ ಮರಾಠಿ ಭಾಷೆಯ ಅರ್ಥ ಕೊಡುವ ಹೆಸರನ್ನು ಅಂಗಡಿಗೆ ಇಡುವಂತೆ ಒತ್ತಾಯಿಸಿದ್ದರು. ಇದರಿಂದಾಗಿ ಕರಾಚಿ ಹೆಸರನ್ನು ಸುದ್ದಿಪತ್ರಿಕೆಗಳಿಂದ ಮುಚ್ಚಿರುವ ಮಾಲೀಕ, ಕೇವಲ ಸ್ವೀಟ್ಸ್ ಹೆಸರನ್ನು ಮಾತ್ರ ಉಳಿಸಿಕೊಂಡಿದ್ದಾರೆ.
PublicNext
19/11/2020 01:27 pm