ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕ್ ಡೌನ್ ಅನುಭವದ ಪುಸ್ತಕ ಪ್ರಕಟಿಸಲಿದ್ದಾರೆ ಸೋನು ಸೂದ್

ನವದೆಹಲಿ- ಕೊರೊನಾ ಕಾಲದ ಸಂದಿಗ್ಧತೆಯಲ್ಲಿ ನಟ ಸೋನು ಸೂದ್ ಉಳಿದೆಲ್ಲ ನಟರಿಗಿಂತ ಹೆಚ್ಚು ಸುದ್ದಿಯಲ್ಲಿದ್ದರು. ಕಾರಣ ದೇಶದ ಬಡ ಕೂಲಿ ಕಾರ್ಮಿಕರಿಗೆ ಅವರು ಮಾಡಿದ ಸಹಾಯ. ಅವರ ಪ್ರಯಾಣದ ವೆಚ್ಚ, ದಿನಸಿ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಸಾಧ್ಯವಾದಷ್ಟು ಹಂಚುವ ಮೂಲಕ ಸೋನು ಸೂದ್ ಮಾನವೀಯತೆಗೆ ನಿದರ್ಶನವಾಗಿದ್ದರು.

ಈಗ ಅದೆಲ್ಲ ಅನುಭವಗಳನ್ನು ಪೇರಿಸಿ ಸೋನು ಸೂದ್ ಪುಸ್ತಕ ಪ್ರಕಟಿಸಲು ಮುಂದಾಗಿದ್ದಾರೆ‌. 'ಐ ಆಮ್ ನಾಟ್ ಮೈಸೆ' ಎಂಬ ಪುಸ್ತಕ ಇದಾಗಿದೆ. ಈ ಪುಸ್ತಕ ಬರುವ ತಿಂಗಳು ಬಿಡುಗಡೆ ಆಗಲಿದೆ‌.

ಪರಸ್ಪರ ಸಹಾಯ ಮಾಡುವುದು ಮಾನವರಾಗಿ ನಮ್ಮ ಜವಾಬ್ದಾರಿಯಾಗಿದೆ. ಅದೇ ಕಾರಣಕ್ಕೆ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ನನ್ನನ್ನು ದೇವದೂತ ಎನ್ನುವುದು ದೊಡ್ಡ ಮಾತು. ಈ ಎಲ್ಲ ಅನುಭವಗಳನ್ನು ಹೊಂದಿರುವ ಪುಸ್ತಕ ಇದಾಗಲಿದೆ ಎಂದು ಸೋನು ಸೂದ್ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

16/11/2020 02:54 pm

Cinque Terre

62.47 K

Cinque Terre

8