ಶ್ರೀನಗರ: ಲಡಾಖ್‌ನ ಶುಶುಲ್ ಮೂಲಕ ಹಾದು ಹೋಗುತ್ತಿದ್ದ ಐಟಿಬಿಪಿ ಸೈನಿಕರಿಗೆ ಖಡಕ್ ಸೆಲ್ಯೂಟ್ ನೀಡಿ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೆಷನ್ ಸೃಷ್ಟಿಸಿದ್ದ ಬಾಲಕ ನವಾಂಗ್ ನಮಗ್ಯಾಲ್ ಐಟಿಬಿಪಿ ಸಮವಸ್ತ್ರದಲ್ಲಿ ಪರೇಡ್ ಮಾಡಿದ್ದಾನೆ.
ಅಕ್ಟೋಬರ್ 11ರಂದು ಬಾಲಕ ನವಾಂಗ್ ನಮಗ್ಯಾಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ರಾಜ್ಯಸಭಾ ಸಂಸದ ಮಗುವಿಗೆ ಸಹಾಯ ಮಾಡಲು ಟ್ವೀಟ್ ಮಾಡಿ ವಿವರ ನೀಡುವಂತೆ ಮನವಿ ಮಾಡಿದ್ದರು. ಅದಾದ ನಂತರ ಫ್ಲ್ಯಾಗ್ಸ್ ಆಫ್ ಹಾನರ್ ಫೌಂಡೇಶನ್ ಮೂಲಕ 2.5 ಲಕ್ಷ ರೂ. ದೇಣಿಗೆಯ ನೀಡುವ ಮೂಲಕ ರಾಜೀವ್ ಚಂದ್ರಶೇಖರ್ ನೆರವಿನ ಹಸ್ತ ಚಾಚಿದ್ದರು.
ಸದ್ಯ ಡಿಡಿ ಪತ್ರಕರ್ತ ಸುಧಾಕರ್ ದಾಸ್ ಸೆರೆಹಿಡಿದ ವಿಡಿಯೋದಲ್ಲಿ, ಬಾಲಕ ನಮಗ್ಯಾಲ್‌ಗೆ ಐಟಿಬಿಪಿ ಸಮವಸ್ತ್ರ ಧರಿಸಿ ಇನ್ನೂ ಉತ್ತಮವಾದ ಸೆಲ್ಯೂಟ್ ನೀಡುವುದನ್ನು ಕಾಣಬಹುದು.
PublicNext
15/11/2020 02:14 pm