ತುಮಕೂರು: ನಗರದ ಬಿಹೆಚ್ ರಸ್ತೆಯಲ್ಲಿನ ಹೋಂಡಾ ಶೋರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ ಪರಿಣಾಮ ಹೊಚ್ಚ ಹೊಸ ಬೈಕುಗಳು ಸುಟ್ಟು ಕರಕಲಾಗಿವೆ.
ತಡರಾತ್ರಿವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶೋರೂಮ್ ನಲ್ಲಿದ್ದ ಬೈಕ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಲಕ್ಷಾಂತರ ಮೌಲ್ಯದ ಬೈಕ್ ಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಬೆಂಕಿ ಆವರಿಸಿರುವ ಹಿನ್ನೆಲೆಯಲ್ಲಿ ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. 200 ಮೀಟರ್ ಅಂತರದಲ್ಲಿ ಪಟಾಕಿ ಮಳಿಗೆಗಳು ಕೂಡ ಇದ್ದವು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಘಟನೆ ಹೊಸ ಬಡವಾಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾನಿಯಾದ ಪ್ರಮಾಣದ ಬಗ್ಗೆ ಇದುವರೆಗೆ ನಿಖರ ಮಾಹಿತಿ ಇಲ್ಲ.
PublicNext
15/11/2020 07:43 am