ಶ್ರೀನಗರ: ಭಾರತೀಯ ಸೇನೆಯು ಇಂದು ಪಾಕಿಸ್ತಾನ ಬಂಕರ್ ಸ್ಫೋಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆಸಿತ್ತು. ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದರು. ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿರುವ ಇಂಡಿಯನ್ ಆರ್ಮಿ, ಪಾಕಿಸ್ತಾನದ ಮೂವರು ಕಮಾಂಡೋಗಳು ಸೇರಿದಂತೆ ಎಂಟು ಜನರನ್ನು ಹೊಡೆದುರಿಳಿಸಿದೆ.
ಭಾರತೀಯ ಸೇನೆಯ ಪ್ರತೀಕಾರದ ಗುಂಡಿನ ದಾಳಿಯಲ್ಲಿ 7ರಿಂದ 8 ಮಂದಿ ಪಾಕಿಸ್ತಾನದ ಸೈನಿಕರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ 10ರಿಂದ 12 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನ ಸೇನೆಯ ಬಂಕರ್‌ಗಳು, ಇಂಧನ ಡಂಪ್‌ಗಳು ಮತ್ತು ಉಡಾವಣಾ ಪ್ಯಾಡ್‌ಗಳು ಸಹ ನಾಶವಾಗಿವೆ ಎಂದು ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿವೆ.
PublicNext
13/11/2020 10:34 pm