ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲವ್‌ ಮ್ಯಾರೇಜ್‌ಗೆ ತಾಯಿ ವಿರೋಧ: ಹೋರ್ಡಿಂಗ್ ಬೋರ್ಡ್ ಏರಿದ ಬಾಲಕಿ- ಮುಂದೇನಾಯ್ತು ಗೊತ್ತಾ?

ಭೋಪಾಲ್: ಪ್ರೀತಿಗೆ ತಾಯಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅಪ್ರಾಪ್ತೆಯೊಬ್ಬಳು ಹೋರ್ಡಿಂಗ್ ಬೋರ್ಡ್ ಏರಿ ಪ್ರತಿಭಟನೆ ನಡೆಸಿದ ವಿಚಿತ್ರ ಪ್ರಸಂಗವೊಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಬಾಲಕಿಯು ಗೆಳೆಯನನ್ನು ಮದುವೆಯಾಗಲು ಮುಂದಾಗಿದ್ದಳು. ಆದರೆ ತಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ಅಪ್ರಾಪ್ತೆ ಭಾನುವಾರ ಹೋರ್ಡಿಂಗ್ ಬೋರ್ಡ್‌ನ ಮೇಲೆ ಹತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾರ್ಡೆಸಿಪುರ ಸ್ಟೇಷನ್ ಉಸ್ತುವಾರಿ ಅಶೋಕ್ ಪಟಿದಾರ್ ಅವರು 30 ರಿಂದ 45 ನಿಮಿಷಗಳ ಕಾಲ ಬಾಲಕಿಯ ಮನವೊಲಿಸಲು ಸರ್ವಪ್ರಯತ್ನ ನಡೆಸಿದರು. ಬಳಿಕ ಅಪ್ರಾಪ್ತೆಯ ಪ್ರಿಯಕರನನ್ನು ಸ್ಥಳಕ್ಕೆ ಕರೆಸಿದರು. ಆಗ ಬಾಲಕಿ ಹೋರ್ಡಿಂಗ್ ಬೋರ್ಡ್‌ನಿಂದ ಕೆಳಗಿಳಿದು ಬಂದಳು.

Edited By : Vijay Kumar
PublicNext

PublicNext

09/11/2020 03:26 pm

Cinque Terre

79.98 K

Cinque Terre

3