ಬೆಂಗಳೂರು : ರಸ್ತೆಯಲ್ಲಿ ಉಂಟಾಗುತ್ತಿರುವ ಅಪಘಾತಗಳನ್ನೆ ಗುರಿಯಾಗಿಸಿದ ಸರ್ಕಾರ ಸದ್ಯ ದ್ವಿಚಕ್ರ ವಾಹನ ಸವಾರರ ಜೊತೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂದಿದ್ದು ಇದರಲ್ಲಿ ನಾಲ್ಕು ವರ್ಷದ ಮಕ್ಕಳು ಸಹ ಸೇರಿದ್ದಾರೆ.
ಸರ್ಕಾರ ಅದ್ಯಾವ ಗಳಿಗೆಯಲ್ಲಿ ಹಿಂದೆ ಮುಂದೆ ಲೆಕ್ಕಿಸದೇ ಈ ನಿಯಮ ತಂದಿತೋ ಆದ್ರೆ 4 ವರ್ಷದ ಚಿಕ್ಕ ಮಕ್ಕಳ ತಲೆ ಸೇಜ್ ಹೆಲ್ಮೆಟ್ ಎಲ್ಲಿ ಸಿಗುತ್ತದೆ ? ಈ ವಿಚಾರ ತೀವ್ರ ಚರ್ಚೆ ಜೊತೆ ವಿಪರೀತ ಆಕ್ರೋಶಕ್ಕೆ ಬಲವಾಗಿದೆ.
ಸದ್ಯ ಈ ನಿಯಮ ಜಾರಿಯಲ್ಲಿರುವ ಬೆಂಗಳೂರಿನಲ್ಲಿ ಚಿಕ್ಕ ಮಕ್ಕಳಿಗೆ ಹೆಲ್ಮೆಟ್ ಸಿಗ್ತಿಲ್ಲ, ಹೆಲ್ಮೆಟ್ ಗಾಗಿ ಯಾವ ಅಂಗಡಿ ತಿರುಗಿದ್ರೂ ಮಕ್ಕಳ ಹೆಲ್ಮೆಟ್ ಇಲ್ವೇ ಇಲ್ಲಾ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಅನ್ನೋ ವಿಚಾರ ಈ ಬೈಕ್ ಸವಾರರಿಗೆ ತಲೆ ಬೀಸಿ ಮಾಡಿದೆ.
ಅದರಲ್ಲೂ ಐಎಸಐ ಮಾರ್ಕ್ ಹೆಲ್ಮೆಟ್ ಧರಿಸುವಂತೆ ಸಾರಿಗೆ ಇಲಾಖೆ ರೂಲ್ಸ್ ಮತ್ತು ತಲೆಗೆ ಟೋಪಿ ತರ ಅರ್ಧ ಹೆಲ್ಮೆಟ್ ಧರಿಸಿದ್ರೂ ಈ ಪೊಲೀಸ್ರು ಕೈ ಮಾಡಿ ದಂಡ ಹಾಕ್ತಾ ಲೈನೆನ್ಸ್ ಬ್ಯಾನ್ ಮಾಡುವ ಎಚ್ಚರಿಕೆ ನೀಡ್ತಿದ್ದು ಬೈಕ್ ಸವಾರರಿಗೆ ಸಮಸ್ಯೆಯಾಗಿದೆ. ಈ ನಿಯಮಾನುಸಾರ ಇನ್ನೊಂದೆಡೆ ಅಂಗಡಿಗಳಲ್ಲೂ ಹೆಲ್ಮೆಟ್ ಗೆ ಬೆಡಿಕೆ ಹೆಚ್ಚಾಗಿದ್ರೆ ಈ ಹುಬ್ಬಳ್ಳಿ ಧಾರವಾಡಗಳಲ್ಲಿ ರಸ್ತೆ ಸರಿ ಮಾಡ್ಸಿ ಆ ಮೇಲೆ ಈ ರೂಲ್ಸ್ ತನ್ನಿರಿ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇವೆ.
PublicNext
30/10/2020 12:52 pm