ನವದೆಹಲಿ : ಈ ಶುಕ್ರವಾರ ಮುಸ್ಲಿಂ ಬಾಂಧವರ ಪವಿತ್ರವಾದ ಈದ್ ಮಿಲಾದ್ ಹಬ್ಬವನ್ನು ದೇಶದಾದ್ಯಂತ ಕೊರೊನಾ ನಡುವೆ ಸರಳ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಈ ಹಬ್ಬದ ನಿಮಿತ್ತ ಸಮಸ್ತ ದೇಶದ ಮುಸ್ಲಿಂ ಬಾಂಧವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ದೇಶದ ಅನೇಕ ಗಣ್ಯರು ಶುಭಾಶಯಗಳ ಹೊಳೆ ಹರಿಸಿದ್ದಾರೆ.
ಹೌದು ! ತಮ್ಮ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಮಿಲಾದ್–ಉನ್–ನಬಿ ದಿನದ ಶುಭಾಶಯ ಈ ದಿನವು ಕರುಣೆ ಮತ್ತು ಸೋದರರ ಭಾವನೆಯನ್ನು ಹೆಚ್ಚು ವಿಸ್ತರಿಸಲಿ ಎಲ್ಲರೂ ಆರೋಗ್ಯದಿಂದ ಮತ್ತು ಖುಷಿಯಿಂದ ಇರಲಿ ಈದ್ ಮುಬಾರಕ್ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮೂಲಕ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಭಾರತದ ಮತ್ತು ಹೊರ ರಾಷ್ಟ್ರಗಳಲ್ಲಿರುವ ನಮ್ಮ ಮುಸ್ಲಿಂ ಸೋದರ ಸೋದರಿಯರಿಗೆ ಶುಭಾಶಯ ಸಮಾಜದ ಒಳಿತಿಗಾಗಿ, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಬೋಧನೆಗಳನ್ನು ಅನುಸರಿಸೋಣ ಎಂದು ತಿಳಿಸಿದ್ದಾರೆ.
ರಾಜನಾಥ್ ಸಿಂಗ್ ಟ್ವೀಟ್ ಮಾಡಿ ಮಿಲಾದ್–ಉನ್–ನಬಿ ದಿನದ ಶುಭಾಶಯ ಈ ಹಬ್ಬವು ನಮ್ಮ ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆಯ ಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಎಲ್ಲರಿಗೂ ಪ್ರೇರಣೆ ನೀಡಲಿ ಎಂದು ಎಲ್ಲರಿಗೂ ಮಿಲಾದ್–ಉನ್–ನಬಿ ದಿನದ ಶುಭಾಶಯಗಳು ತಿಳಿಸಿದ್ದರೆ ಈ ಹಬ್ಬವು ದೇಶಾದ್ಯಂತ ಶಾಂತಿ, ಸಾಮರಸ್ಯ, ಸಹೋದರತೆ ಮತ್ತು ಸಂತೋಷವನ್ನು ತರಲಿ ಎಂದು ಗೃಹ ಸಚಿವ ಅಮಿತ್ ಹೇಳಿದ್ದಾರೆ.
PublicNext
30/10/2020 10:56 am